
ಮದುವೆ ಎನ್ನುವುದು ಪ್ರತೀ ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಮುಂದೆ ಆಕೆಯ ಬದುಕಿನ ಸುಖ-ದುಃಖ ಆಕೆಯ ಬಾಳ ಸಂಗಾತಿ ಮೇಲೆ ಅವಲಂಬಿತವಾಗಿರುತ್ತದೆ.
ಮದುವೆಯಾಗುವ ಹುಡುಗ ಎಷ್ಟು ಶ್ರೀಮಂತ ಎಂದು ನೋಡುವ ಬದಲು ಎಷ್ಟು ಗುಣವಂತ ಅಂತ ನೋಡಿದರೆ ಮುಂದಿನ ಬದುಕು ಸುಂದರವಾಗಿರುತ್ತದೆ. ಅದರಲ್ಲೂ ಈ ಕೆಳಗಿನ ಗುಣ ಇರುವ ಹುಡುಗನನ್ನು ಮದುವೆಯಾದರೆ ಆತ ಮಿ. ಪರ್ಫೆಕ್ಟ್ ಗಂಡ ಆಗಿರುತ್ತಾನೆ.
ಒಬ್ಬ ಒಳ್ಳೆಯ ಗಂಡನಾಗಲು ಹುಡುಗರಲ್ಲಿ ಇರಬೇಕಾದ ಗುಣಗಳು
ಆತ ನಿಮ್ಮ ಮುಖದಲ್ಲಿ ನಗು ಮೂಡಿಸುತ್ತಾನೆ. ಆತನೊಂದಿಗೆ ಇರುವಾಗ ನಿಮಗೆ ತುಂಬಾ ಕಂಫರ್ಟ್ ಅನಿಸುವುದು. ನಿಮ್ಮ ಸಾಮರ್ಥ್ಯ ಗುರುತಿಸಿ, ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತಾನೆ. ಯಾವುದೇ ಕಾರಣಕ್ಕೂ ಏನನ್ನೂ ನಿಮ್ಮ ಮೇಲೆ ಬಲವಂತವಾಗಿ ಹೇರುವುದಿಲ್ಲ.
ಆತ ಯಾವತ್ತೂ ಅವನ ಇಚ್ಛೆಗೆ ಅನುಗುಣವಾಗಿ ನೀವು ಬದಲಾಗಬೇಕೆಂದು ಬಯಸುವುದಿಲ್ಲ. ನಿಮ್ಮನ್ನು ನೀವಾಗಿರಲು ಬಿಡುತ್ತಾನೆ. ನಿಮ್ಮ ತಪ್ಪುಗಳನ್ನು ಕೂಡಲೇ ತಿದ್ದುತ್ತಾನೆ. ಆತನ ನಿರ್ಧಾರವನ್ನು ನಿಮ್ಮ ಮೇಲೆ ಹೇರುವ ಬದಲು ನಿಮ್ಮ ಭಾವನೆಗೂ ಗೌರವ ಕೊಡುತ್ತಾನೆ.
ಯಾರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಿಡುವುದಿಲ್ಲ. ನಿಮ್ಮನ್ನು ರಕ್ಷಣೆ ಮಾಡುತ್ತಾನೆ. ಯಾವತ್ತಿಗೂ ಕೆಟ್ಟ ಮಾತು ಆಡುವುದಾಗಲಿ, ಕೈ ಮಾಡುವುದಾಗಲಿ ಮಾಡುವುದಿಲ್ಲ, ಬದಲಿಗೆ ನಿಮ್ಮಿಂದ ಏನಾದರೂ ತಪ್ಪಾದರೆ ಅದನ್ನು ನಿಮಗೆ ಮನದಟ್ಟು ಮಾಡಿಸುತ್ತಾನೆ.
ನಿಮ್ಮ ಫ್ರೆಂಡ್ಸ್ ಜತೆ ಬೆರೆಯಲು, ನಿಮಗೆ ಇಷ್ಟದಂತೆ ನಡೆಯಲು ಯಾವತ್ತಿಗೂ ಅಡ್ಡ ಪಡಿಸುವುದಿಲ್ಲ. ನೀವು ನೀವಾಗಿಯೇ ಇರಲು ಬಿಡುತ್ತಾನೆ. ನಿಮಗೊಬ್ಬ ಒಳ್ಳೆಯ ಸ್ನೇಹಿತನಾಗಿರುತ್ತಾನೆ.
ಈ ಗುಣಗಳಿರುವ ಹುಡುಗ ಮದುವೆಯಾಗುತ್ತೇನೆ ಎಂದರೆ ಇನ್ನೇನು ಹೆಚ್ಚು ಚಿಂತೆ ಮಾಡಬೇಡಿ ಯಸ್ ಅಂದುಬಿಡಿ.
Comments are closed.