ಕರ್ನಾಟಕ

ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಬಂಧನ

Pinterest LinkedIn Tumblr


ಬೆಂಗಳೂರು: ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್‌ ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ. ಆತನಿಂದ ಮೂರುವರೆ ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ತಪ್ಪಿಸಿಕೊಳ್ಳಲಿದ್ದ ಕಳ್ಳನನ್ನು ಗಾಳಿಯಲ್ಲಿ ಗುಂಡು ಹಾರಿಸಿ ಬಂಧಿಸಿದ್ದ ಪೊಲೀಸರು ಆತನಿಂದ ಕಳವು ಮಾಲು ಪಡೆದಿದ್ದ ಗವಿ ಸಿದ್ದೇಶ್ ಎಂಬಾತನನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಅಚ್ಚುತ್ ಕುಮಾರನಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ ಒಂದು ಕೋಟಿ ಆರು ಲಕ್ಷ ಮೌಲ್ಯದೆಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 77 ಪ್ರಕರಣಗಳು, ಇತರ ಜಿಲ್ಲೆಗಳಲ್ಲಿ 28 ಪ್ರಕರಣಗಳು ಸೇರಿದಂತೆ ಒಟ್ಟು 105 ಪ್ರಕರಣಗಳಲ್ಲಿ ಕುಮಾರ್ ಪೊಲೀಸರಿಗೆ ಬೇಕಾಗಿದ್ದ.

Comments are closed.