ಕರಾವಳಿ

ಹೆಂಡತಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ಭೂಪ: 2 ವರ್ಷದಿಂದ ನ್ಯಾಯಾಲಯಕ್ಕೆ ಹಾಜಾರಾಗದ ವಾರಂಟ್ ಆರೋಪಿ ಸೆರೆ

Pinterest LinkedIn Tumblr

ಕುಂದಾಪುರ: ಹೆಂಡತಿಗೆ ಕೈಕೊಟ್ಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂದಾಪುರ ಪಿ‌ಎಸೈ ಹರೀಶ್ ಆರ್ ನಾಯಕ್ ಮಾರ್ಗದರ್ಶನದಲ್ಲಿ ಹೆಡ್‌ಕಾನ್ಸ್‌ಟೇಬಲ್ ಹರೀಶ್ ಹಾಗೂ ಕಾನ್ಸ್‌ಟೇಬಲ್ ಪ್ರಾಣೇಶ್ ಅವರು ಆರೋಪಿ ಪ್ರಶಾಂತ್ ಮಂಚಿಕೊಪ್ಪ ಎಂಬಾತನನ್ನು ಬಂಧಿಸಿ ಕುಂದಾಪುರ ಜೆ‌ಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಗಸ್ಟ್ 16ರ ತನಕ ಆರೋಪಿ ಪ್ರಶಾಂತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೋಟೇಶ್ವರದ ಯುವತಿಯೊಂದಿಗೆ ಪ್ರಶಾಂತ್ ವಿವಾಹವಾಗಿದ್ದನು. ಬಳಿಕ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪ್ರಶಾಂತ್ ಬೇರೆ ಮಹಿಳೆಯೊಂದಿಗೆ ವಿವಾಹವಾಗಿದ್ದನು. ಇದೇ ವಿಚಾರವಾಗಿ ಈತನ ವಿರುದ್ದ ಕೇಸು ದಾಖಲಾಗಿತ್ತು. ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಪ್ರಶಾಂತ್ ವಿರುದ್ದ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು.

 

Comments are closed.