ರಾಷ್ಟ್ರೀಯ

ಜಮ್ಮು ಕಾಶ್ಮೀರ: ಸೇನೆಯಿಂದ ಇಬ್ಬರು ಎಲ್‌ಇಟಿ ಉಗ್ರರ ಹತ್ಯೆ

Pinterest LinkedIn Tumblr


ಶ್ರೀನಗರ : ದಕ್ಷಿಣ ಕಾಶ್ಮೀರದ ಅನಂತನಾಗ್‌ ಪಟ್ಟಣದಲ್ಲಿಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್‌ ಎ ತಯ್ಯಬ ಉಗ್ರರು ಹತರಾಗಿದ್ದಾರೆ.

ಉಗ್ರರು ಮನೆಯೊಂದರಲ್ಲಿ ಅಡಗಿಕೊಂಡಿರುವ ಬಗ್ಗೆ ದೊರಕಿದ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸ್‌, ಸಿಆರ್‌ಪಿಎಫ್ ಮತ್ತು ಸೇನೆಯ ಜಂಟಿ ತಂಡ ಪಟ್ಟಣದ ಲಾಲ್‌ ಚೌಕ್‌ ನಲ್ಲಿರುವ ಮೆಹಮಾನ್‌ ಮೊಹಲ್ಲಾದ ಮನೆಯೊಂದರ ಮೇಲೆ ಎನ್‌ಕೌಂಟರ್‌ ನಡೆಸಿತು.

ಎನ್‌ಕೌಂಟರ್‌ ಅನುಸರಿಸಿ ಇಡಿಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ; ಸ್ಥಳದಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ತಂಡದವರು ಕೂಲಂಕಷ ಅವಲೋಕನ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಅಲ್‌ತಾಫ್ ಖಾನ್‌ ತಿಳಿಸಿದ್ದಾರೆ.

Comments are closed.