ರಾಷ್ಟ್ರೀಯ

ಮದ್ರಾಸ್‌ ಹೈಕೋರ್ಟ್‌ ನಿಂದ ಮಾರನ್‌ ಸಹೋದರರ ಕೇಸ್‌ ಮುಕ್ತಿ

Pinterest LinkedIn Tumblr

ಚೆನ್ನೈ : ಬಿಎಸ್‌ಎನ್‌ಎಲ್‌ ಅಕ್ರಮ ಟೆಲಿಫೋನ್‌ ಎಕ್ಸ್‌ಚೇಂಜ್‌ ಕೇಸಿನಿಂದ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್‌ ಮತ್ತು ಅವರ ಸಹೋದರ ಕಲಾನಿಧಿ ಮಾರನ್‌ ಅವರನ್ನು ಮುಕ್ತಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಇಂದು ಬುಧವಾರ ರದ್ದುಗೊಳಿಸಿದೆ.

ಇನ್ನು 12 ವಾರಗಳ ಒಳಗೆ ಮಾರನ್‌ ಸಹೋದರರ ವಿರುದ್ಧ ದೋಷಾರೋಪಗಳನ್ನು ಸಿದ್ದಗೊಳಿಸುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ.

ಕೇಸನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾದುದನ್ನು ಅನುಸರಿಸಿ ಈ ವರ್ಷ ಮಾರ್ಚ್‌ನಲ್ಲಿ ಕೆಳ ನ್ಯಾಯಾಲಯ ಮಾರನ್‌ ಸಹೋದರರನ್ನು ಮುಕ್ತಗೊಳಿಸಿತ್ತು.

ಮಾರನ್‌ ಸಹೋದರರು ಈ ಅಕ್ರಮದ ಮೂಲಕ ರಾಷ್ಟ್ರೀಯ ಖಜಾನೆಗೆ 1.76 ಕೋಟಿ ರೂ. ನಷ್ಟ ಉಂಟುಮಾಡಿರುವರೆಂದು ಸಿಬಿಐ ಆರೋಪಿಸಿತ್ತು.

Comments are closed.