ಮನೋರಂಜನೆ

ಅನಿಲ್‌ ಕಪೂರ್‌ ಜೊತೆ ಡ್ಯಾನ್ಸ್‌ ಮಾಡಿದ ನಟಿ ರಶ್ಮಿಕಾ ಮಂದಣ್ಣ!

Pinterest LinkedIn Tumblr


ಕಿರಿಕ್‌ ಹುಡುಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನ‌ಲ್ಲಿ ಮಾತ್ರವಲ್ಲದೇ ಟಾಲಿವುಡ್‌ನ‌ಲ್ಲಿಯೂ ಸಕತ್‌ ಸೌಂಡು ಮಾಡುತ್ತಿದ್ದು, ಇದೀಗ ಬಾಲಿವುಡ್‌ ಸ್ಟಾರ್‌ ಜೊತೆ ಕಾಣಿಸಿಕೊಂಡಿದ್ದಾರೆ.

ಹೌದು! ಚಮಕ್‌ ಹುಡುಗಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಜೊತೆ ವೇದಿಕೆ ಹಂಚಿಕೊಂಡಿದ್ದಲ್ಲದೇ ಅದೇ ಸ್ಟೇಜ್‌ ಮೇಲೆ ಅವರ ಜೊತೆ “ಮೂರೇ ಮೂರು ಪೆಗ್ಗಿಗೆ…’ ರ್ಯಾಪ್‌ ಸಾಂಗಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗಷ್ಟೆ ನಡೆದ ಖಾಸಗಿ ಪತ್ರಿಕೆಯ ಅವಾರ್ಡ್‌ ಸಮಾರಂಭದಲ್ಲಿ ನಟ ಅನಿಲ್‌ ಕಪೂರ್‌ ಜೊತೆಯಲ್ಲಿ ರಶ್ಮಿಕಾ ಡ್ಯಾನ್ಸ್‌ ಮಾಡಿದ್ದು,ಇದೀಗ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದೆ.

ಈ ಬಗ್ಗೆ ರಶ್ಮಿಕಾ ಕೂಡ ಸೋಷಿಯಲ್‌ ಮೀಡಿಯಾದಲ್ಲಿ “ನನಗೆ ನಾಚಿಕೆ ಆದಂತ ಗಳಿಗೆ ಅದು. ನಾವು ಎಷ್ಟು ಚಿತ್ರ ಮಾಡಿದ್ದೇನೆ, ಯಾವ ಇಂಡಸ್ಟ್ರಿಗೆ ಸೇರಿದ್ದೇವೆ, ಎನ್ನುವುದು ಯಾವತ್ತಿಗೂ ಲೆಕ್ಕಕ್ಕೆ ಬರುವುದಿಲ್ಲ. ಒಟ್ಟಿಗೆ ಸೇರಿದಾಗ ಸದಾ ಸಂತಸದಿಂದ ಕೂಡಿರುತ್ತದೆ. ಇಲ್ಲಿಯ ವರೆಗೂ ನಾನು ಭೇಟಿ ಮಾಡಿದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಖುಷಿಯಿಂದ ನಡೆದುಕೊಂಡಿದ್ದಾರೆ. ಇದು ನನಗೆ ಸಿಕ್ಕಿರುವ ಅದೃಷ್ಟ ಮತ್ತು ಆಶೀರ್ವಾದ ಹಾಗೂ ನಾನು ಹೀಗೆ ಇರಲು ಬಯಸುತ್ತೇನೆ’. ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ

Comments are closed.