ಕರ್ನಾಟಕ

ಪೇಜಾವರ ಶ್ರೀಗಳಿಗೆ ಪದ್ಮ ಎಂಬ ಮಗಳಿದ್ದಾಳೆ ಎಂಬ ಆರೋಪ ಅಸ್ಪಷ್ಟವಾದುದ್ದೇನಲ್ಲ: ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಹೇಳಿಕೆ

Pinterest LinkedIn Tumblr


ಮಡಿಕೇರಿ: ಉಡುಪಿಯ ಪೇಜಾವರ ಮಠದ ಪೇಜಾವರ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ, ನಂತರ ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಗೆ ಒಳಪಡಬೇಕು ಎಂದು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಒತ್ತಾಯಿಸಿದ್ದಾರೆ.

ಪೇಜಾವರ ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಸಂಗ ಇದ್ದು, ಅವರಿಗೆ ಪದ್ಮಾ ಎಂಬ ಮಗಳಿದ್ದಾಳೆಂಬ ಅರೋಪಗಳು ಇದೀಗ ಕೇಳಿ ಬರತೊಡಗಿವೆ. ‘ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ’ ಎಂದು ಭ್ರಷ್ಟ ರಾಜಕಾರಣಿಗಳನ್ನು ಪೇಜಾವರ ಶ್ರೀಗಳು ಇಲ್ಲಿ ಅನುಕರಣೆ ಮಾಡಿರುವುದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಸುಬ್ಬಯ್ಯ ಹೇಳಿದ್ದಾರೆ.

ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಸಂಗ ಇತ್ತೆಂದು ಅವರಿಗೆ ಪದ್ಮ ಎಂಬ ಮಗಳು ಸಹ ಇದ್ದಾಳೆಂದು ಕೇಳಿ ಬಂದಿರುವ ಆರೋಪ ಅಸ್ಪಷ್ಟವಾದುದ್ದೇನಲ್ಲ. ಇದು ಮೇಲ್ನೋಟಕ್ಕೆ ಸತ್ಯದಂತೆ ಗೋಚರಿಸುತ್ತಿದೆ. ‘ಬೆಂಕಿ ಇಲ್ಲದೆ ಹೊಗೆ ಏಳುವುದಿಲ್ಲ’ ಎಂಬ ಮಾತಿಗೆ ಶ್ರೀಗಳು ಏನೆನ್ನುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದರು.

ಆರೋಪವನ್ನು ಅಲ್ಲಗಳೆದಿರುವ ಶ್ರೀಗಳು ಅರೋಪ ಸಾಬೀತಾದರೆ ಪೀಠ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದು ಯತಿವರ್ಯ ಪರಂಪರೆಗೆ ಶೋಭೆ ತರುವ ಮಾತಲ್ಲ. ನೈತಿಕತೆಯ ಪ್ರತಿಬಿಂಬವೇ ಆಗಿರಬೇಕಾದ ಪೇಜಾವರ ಶ್ರೀಗಳು ತಮ್ಮ ಮೇಲಿನ ಆರೋಪದ ಹಿನ್ನೆಲೆ ಮೊದಲು ಪೀಠ ತ್ಯಾಗ ಮಾಡಿ ನಂತರ ಈ ಕುರಿತ ಸಮಗ್ರ ತನಿಖೆಗೆ ಒತ್ತಾಯಿಸಬೇಕಿತ್ತು.
– ಎ.ಕೆ.ಸುಬ್ಬಯ್ಯ ಹಿರಿಯ ರಾಜಕಾರಣಿ

Comments are closed.