
ತಿರುವನಂತಪುರಂ: ಕೇರಳದಲ್ಲಿ ಸತತ 10 ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ನೆರೆ ಆವರಿಸಿದೆ. ಸತತ ಮಳೆಯಿಂದಾಗಿ ಕಳೆದ 10 ದಿನಗಳಲ್ಲಿ ಸುಮಾರು 14 ಜನ ಮೃತಪಟ್ಟಿರುವ ವರದಿಯಾಗಿದೆ.
ಕೇರಳದ ಕೊಟ್ಟಾಯಂ, ಅಲ್ಲಾಪ್ಪುಝ, ಇರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಜತೆಗೆ ಸುಮಾರು 10,000 ಜನರನ್ನು ಪರಿಹಾರ ಶಿಬಿರದಲ್ಲಿ ಇರಿಸಲಾಗಿದೆ.
ಬುಧವಾರ ಸಭೆ ನಡೆಸಿದ ಕೇರಳದ ಮುಖ್ಯಮಂತ್ರಿ ಪಿನರಾಯ್ ವಿಜಯನ್ ಅವರು ಶಿಬಿರದಲ್ಲಿರುವ ಪ್ರತಿಯೊಬ್ಬರಿಗೂ ರು.1 ಸಾವಿರವನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಟಾಮ್ ಜೊಸ ಅವರಿಗೆ ಸೂಚಿಸಿದ್ದಾರೆ.
ಮಳೆಯಿಂದಾಗಿ ಕೊಟ್ಟಾಯಮನ ಮೀನಚಿಲ್ ನದಿ ತುಂಬಿ ಹರಿಯುತ್ತಿದೆ. ಸುಮಾರು 10 ರೈಲುಗಳ ಸಂಚಾರ ಸ್ಥಗಿತಗೊಳಿಸಲು ದಕ್ಷಿಣ ರೈಲ್ವೆ ವಿಭಾಗ ನಿರ್ಧರಿಸಿದೆ. ಈ ಭಾಗದಿಂದ ಸುಮಾರು 50 ಜನರನ್ನು ಪರಿಹಾರ ಶಿಬಿರದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
Comments are closed.