
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠನಾಗಿದ್ದೇನೆ ಎಂದು ಹೇಳಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಶಾಸಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಗೆ ಅಮೃತವನ್ನೇ ನೀಡಿದೆ ಹೊರತು ವಿಷವನ್ನಲ್ಲ. ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರೋವರೆಗೂ ಕಾಂಗ್ರೆಸ್ ಪಕ್ಷವನ್ನು ಸ್ಮರಿಸಬೇಕು ಎಂದು ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
80 ಸ್ಥಾನಗಳು ಇದ್ದರೂ ಕೂಡ 37 ಸ್ಥಾನ ಇರೋ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ. ಆರೂವರೆ ಕೋಟಿ ಜನರ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳು ಈ ರೀತಿ ಅಳಬಾರದು ಎಂದು ಸುಧಾರಕ್ ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠನಾಗಿದ್ದೇನೆ. ನಾನು ಸಂತಸದಿಂದ ಇಲ್ಲ. ಮುಳ್ಳಿನ ಆಸನದಲ್ಲಿ ಕುಳಿತ್ತಿದ್ದೇನೆ. ಹಿಂದಿನ ಸರ್ಕಾರದ ಸಾಲಮನ್ನಾದ ಹೊರೆಯೂ ನನ್ನ ಮೇಲಿದೆ. ಈಗ ಸಾಲಮನ್ನಾ ಮಾಡಿದರೂ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಾಗಿಲ್ಲ ಎಂದು ಸಮಾರಂಭವೊಂದರಲ್ಲಿ ಹೇಳುತ್ತಲೇ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದರು.
Comments are closed.