ಮನೋರಂಜನೆ

ಸ್ಯಾಂಡಲ್’ವುಡ್’ಗೆ ಬಹುಭಾಷಾ ನಟಿ ಸನಮ್ ಶೆಟ್ಟಿ

Pinterest LinkedIn Tumblr


ಬೆಂಗಳೂರು: ಬಹುಭಾಷೆ ನಟಿ ಸನಮ್ ಶೆಟ್ಟಿ, ಕನ್ನಡದಲ್ಲೇ ಬ್ಯುಸಿ ಆಗುವುದು ಬಹುತೇಕ ಗ್ಯಾರಂಟಿ ಆಗಿದೆ. ಮೊದಲ ಚಿತ್ರ ‘ಅಥರ್ವ’ ಬಿಡುಗಡೆ ಆಗುವ ಮುನ್ನವೇ ಅವರು ಕನ್ನಡದ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಮಂಗಳೂರು ಮೂಲದ ಮಂಜುನಾಥ್ ಶೆಟ್ಟಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಆದ್ರೆ, ಆಗಸ್ಟ್ ಮೊದಲ ವಾರದಿಂದಲೇ ಶೂಟಿಂಗ್ ಶುರುವಾಗುತ್ತಿದೆ. ಈ ಚಿತ್ರದಲ್ಲಿ ಸನಮ್ ಶೆಟ್ಟಿ ನಾಯಕಿ. ಇದೊಂದು ಮಹಿಳಾ ಪ್ರಧಾನ ಚಿತ್ರ. ಸನಮ್ ಶೆಟ್ಟಿಯವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರೆದುರು ಖಳ ನಟನಾಗಿ ಯಶವಂತ್ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಮಂಗಳೂರು ಮೂಲದ ಉದ್ಯಮಿಯೊಬ್ಬರು ಇದರ ನಿರ್ಮಾಪಕರು. ಸನಮ್ ಶೆಟ್ಟಿ ಖುಷಿ ಆಗಿದ್ದಾರೆ. ಬಹುದಿನದ ಆಸೆ ಈಗ ಈಡೇರುತ್ತಿದೆ ಅಂತಲೇ ಮಾತಿಗಿಳಿಯುತ್ತಾರೆ. ‘ನಾನು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರು. ಆದ್ರೆ ಬಣ್ಣದ ಜಗತ್ತಿನ ನಂಟಿನೊಂದಿಗೆ ಚೆನ್ನೈಗೆ ಬಂದು ಬಿಟ್ಟೆ. ಹಾಗಾಗಿ ಎಲ್ಲರೂ ನನ್ನನ್ನು ಚೆನ್ನೈ ಮೂಲದವರು ಅಂತಲೇ ಅಂದುಕೊಂಡಿದ್ದಾರೆ. ಹಾಗಾಗಿಯೋ ಏನೋ ಇಲ್ಲಿ ತನಕ ನನಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳೇ ಬಂದಿರಲಿಲ್ಲ.

ಆದ್ರೆ, ‘ಅಥರ್ವ’ ಚಿತ್ರದ ಮೂಲಕ ನಾನಿಲ್ಲಿ ಪರಿಚಯಿಸಿಕೊಳ್ಳುವಂ ತಾಯಿತು. ನಿರ್ದೇಶಕ ಅರುಣ್ ಹಾಗೂ ನಿರ್ಮಾಪಕ ವಿನಯ್ ಕುಮಾರ್ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಈ ಚಿತ್ರದೊಂದಿಗೆ ಕೊನೆಗೂ ಇಲ್ಲಿಗೆ ಬಂದೆ ಎನ್ನುವ ಖುಷಿಯ ಜತೆಗೆ ಇಲ್ಲಿಯೇ ಈಗ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದೇನೆ. ಅದನ್ನು ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಸಮನ್ ಶೆಟ್ಟಿ.

ಸನಮ್ ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ ಹೆಸರಾಂತ ಮುಮ್ಮುಟಿ ಸಿನಿಮಾದಲ್ಲೂ ಸನಮ್ ಕಾಣಿಸಿಕೊಂಡಿದ್ದಾರೆ. ಸರ್ಜಾ ಕುಟುಂಬದ ಕುಡಿ ಪವನ್ ತೇಜ್ ಅಭಿನಯದ ‘ಅಥರ್ವ’ದಲ್ಲಿ ವಿಭಿನ್ನ ಪಾತ್ರದೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ.

Comments are closed.