
ಹೊಸದಿಲ್ಲಿ: ಭಾನುವಾರ ಮಧ್ಯಾಹ್ನ ಹರ್ಯಾಣದ ಸೋನಿಪತ್‌ನಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿರುವ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಷ್ಟ್ರ ರಾಜಧಾನಿಯ ಕೆಲವೆಡೆಯೂ ಭೂ ಕಂಪನದ ಅನುಭವವಾಗಿದ್ದು, ನೋಯ್ಡಾ, ಉತ್ತರ ಪ್ರದೇಶನ ಕೆಲ ಭಾಗಗಳಲ್ಲಿ ಕಂಪನ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.
ಮಧ್ಯಾಹ್ನ 3.37 ರ ವೇಳೆಗೆ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.
ಯಾವುದೇ ಹಾನಿಯ ಕುರಿತು ಇದುವರೆಗೆ ವರದಿಯಾಗಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Comments are closed.