ರಾಷ್ಟ್ರೀಯ

ಗ್ರಾಹಕರಿಗೆ ಬಿಗ್ ಶಾಕ್: ಸಿಲಿಂಡರ್ ಬೆಲೆ ಮತ್ತೆ ಏರಿಕೆ !

Pinterest LinkedIn Tumblr

ನವದೆಹಲಿ: ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳ ಹಾಗೂ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಇಳಿಕೆ ಹಿನ್ನೆಲೆಯಲ್ಲಿ, ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 2 ರೂ 71 ಪೈಸೆಯಷ್ಟು ಹೆಚ್ಚಳಗೊಂಡಿದೆ. ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ ಎಂದು ಭಾರತೀಯ ತೈಲ ನಿಗಮಗಳು ಹೇಳಿಕೆ ನೀಡಿವೆ.

ವಿದೇಶಿ ವಿನಿಮಯ ದರ ಹಾಗೂ ಸರಾಸರಿ ದರದ ಆಧಾರದ ಮೇಲೆ ಪ್ರತಿ ತಿಂಗಳ 1 ತಾರೀಖಿನಂದು ತೈಲ ಸಂಸ್ಥೆಗಳು ಅಡುಗೆ ಅನಿಲ ದರವನ್ನು ಪರಿಷ್ಕರಿಸುತ್ತವೆ. ಜಿಎಸ್ ಟಿಯ ಕಾರಣ ದೇಶಿಯ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ ಹೆಚ್ಚಳಗೊಂಡಿದೆ ಎಂದು ತಿಳಿಸಲಾಗಿದೆ.

ಜಾಗತಿಕ ತೈಲ ಬೆಲೆ ಹೆಚ್ಚಳದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 55. 50 ಪೈಸೆಯಷ್ಟು ಹೆಚ್ಚಳವಾಗಿದೆ. 52. 79 ರೂ. ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಜುಲೈ 2018ರಿಂದ ಗ್ರಾಹಕರಿಗೆ ಬ್ಯಾಂಕು ಖಾತೆಗಳಿಗೆ ವರ್ಗಾವಣೆಯಾಗಲಿರುವ ಸಬ್ಸಿಡಿ ಮೊತ್ತದಲ್ಲಿ ಏರಿಕೆಯಾಗಲಿದೆ. ಜೂನ್ ನಲ್ಲಿ 204.95 ರೂಪಾಯಿ ಇದ್ದ ಸಬ್ಸಿಡಿ ಮೊತ್ತ ಜುಲೈ ತಿಂಗಳಲ್ಲಿ 257. 74 ಪೈಸೆಗೆ ಏರಿಕೆಯಾಗಲಿದೆ. ಇದರಿಂದ ದೇಶಿಯ ಅಡುಗೆ ಅನಿಲ ಗ್ರಾಹಕರನ್ನು ರಕ್ಷಿಸಿದಂತಾಗುತ್ತದೆ ಎಂದು ತೈಲ ನಿಗಮಗಳು ಹೇಳಿಕೆಯಲ್ಲಿ ತಿಳಿಸಿವೆ.

Comments are closed.