ರಾಷ್ಟ್ರೀಯ

ಆಕಸ್ಮಿಕವಾಗಿ ಗಡಿದಾಟಿ ಬಂದ ಬಾಲಕನಿಗೆ ಸಿಹಿ ತಿನಿಸು, ಬಟ್ಟೆ ಕೊಟ್ಟು ವಾಪಸ್ ಕಳುಹಿಸಿದ ಭಾರತೀಯ ಯೋಧರು!

Pinterest LinkedIn Tumblr

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 11 ವರ್ಷದ ಬಾಲಕ ಆಕಸ್ಮಿಕವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು ಇದನ್ನು ಗಮನಿಸಿದ ಭಾರತೀಯ ಯೋಧರು ಬಾಲಕನಿಗೆ ಸಿಹಿ ತಿನಿಸು ಮತ್ತು ಬಟ್ಟೆಗಳನ್ನು ಕೊಟ್ಟ ಪಾಕಿಸ್ತಾನ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪೂಂಚ್ ಜಿಲ್ಲೆಯ ಚಾಕನ್ ದ ಬಾಗ್ ಕ್ರಾಸ್ಸಿಂಗ್ ಪಾಯಿಂಟ್ ನಲ್ಲಿ ಬಾಲಕನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಬಾಲಕನನ್ನು ಮೊಹಮ್ಮದ್ ಅಬ್ದುಲ್ಲಾ ಎಂದು ತಿಳಿದುಬಂದಿದೆ.

ಜೂನ್ 24ರಂದು ಭಾರತೀಯ ಯೋಧರು ಬಾಲಕನನ್ನು ವಶಕ್ಕೆ ಪಡೆದು ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಾಲಕನ ವಾಪಸಾತಿಗಾಗಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡು ನಂತರ ಆತನನ್ನ ವಾಪಸ್ ಕಳುಹಿಸಿಕೊಡಲಾಯಿತು.

ಮಾನವೀಯತೆ ಆಧಾರದ ಮೇಲೆ ಬಾಲಕನನ್ನು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

Comments are closed.