
ಖುಂಠಿ: ಕಳೆದ ಜೂನ್ 26ರಂದು ಪಾತಾಳಗರಢಿ ಬೆಂಬಲಿಗರಿಂದ ಅಪಹೃತರಾಗಿದ್ದ ಮೂವರು ಜಾರ್ಖಂಡ್ ಪೊಲೀಸರನ್ನು ರಕ್ಷಿಸಲಾಗಿದೆ ಎಂದು ಇಂದು ಶುಕ್ರವಾರ ವರದಿಗಳು ತಿಳಿಸಿವೆ.
ಖುಂಠಿ ಜಿಲ್ಲೆಯ ಅನಿಗಾಡಾ – ಚಂಡೀದೀಹ್ ನಲ್ಲಿನ ಬಿಜೆಪಿ ಸಂಸದ ಕರಿಯಾ ಮುಂಡ ಅವರ ನಿವಾಸದಿಂದ ಅಪಹೃತರಾಗಿ ಬಳಿಕ ಪಾರುಗೊಳಿಸಲ್ಪಟ್ಟ ಮೂವರು ಪೊಲೀಸ್ ಸಿಬಂದಿಗಳಾದ ವಿನೋದ್ ಕರ್‌ಕೆಟ್ಟಾ, ಸಿಯೋನ್ ಸುರಿನ್ ಮತ್ತು ಸುಬೋಧ್ ಕುಜೂರ್ ಅವರನ್ನು ಇಂದು ಶುಕ್ರವಾರ ಸಾಯಿಕೋ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಇವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಬರಮಾಡಿಕೊಂಡರು. ಆದರೆ ಅಪಹೃತ ಪೊಲೀಸ್ ಸಿಬಂದಿಗಳ ಬಳಿ ಇದ್ದ ಶಸ್ತ್ರಾಸ್ತ್ರಗಳು ಮಾತ್ರ ಸಿಕ್ಕಿಲ್ಲ.
ಕರಿಯಾ ಮುಂಡ ಅವರ ನಿವಾಸಕ್ಕೆ ನುಗ್ಗಿದ್ದ ಪಾತಾಳಗರಡಿ ಬೆಂಬಲಿಗರು ಅಲ್ಲಿದ್ದ ಮೂವರು ಪೊಲೀಸ್ ಸಿಬಂದಿಗಳನ್ನು ಬಲವಂತವಾಗಿ ತಮ್ಮೊಂದಿಗೆ ಅಪಹರಿಸಿ ಒಯ್ದರಲ್ಲದೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ ಕೆ ಮಲಿಕ್ ಹೇಳಿದರು.
Comments are closed.