ಮನೋರಂಜನೆ

ಭಾರಿ ಸದ್ದು ಮಾಡುತ್ತಿರುವ ಇರ್ಫಾನ್ ಖಾನ್-ದುಲ್ಕರ್ ಸಲ್ಮಾನ್ ಅಭಿನಯದ ‘ಕಾರ್ವಾನ್’ ಚಿತ್ರದ ಟ್ರೈಲರ್

Pinterest LinkedIn Tumblr

ಮುಂಬೈ: ಸಾವು ಎಂಬ ಪದ ಯಾರಿಗೂ ಖುಷಿ ಕೊಡುವುದಿಲ್ಲ. ಒಬ್ಬ ವ್ಯಕ್ತಿಗೆ ಸಾವಿನ ದಿನ ಹತ್ತಿರ ಬರುತ್ತಿದೆ ಎಂದು ಗೊತ್ತಾದರೆ ಸಾವಿನ ಬಗ್ಗೆ ಹಾಸ್ಯಪ್ರಜ್ಞೆ ಬೆಳೆಸಿಕೊಂಡರೆ ಒಳ್ಳೆಯದು. ಬದುಕಿರುವಷ್ಟು ದಿನವಾದರೂ ಚೆನ್ನಾಗಿ ಬಾಳಬಹುದು ಎನ್ನುತ್ತಾರೆ ಈ ಚಿತ್ರ ನೋಡಿದ ಸಿನಿಮಾ ಅಭಿಮಾನಿ ಮತ್ತು ವಿಶ್ಲೇಷಕರೊಬ್ಬರು.

ಹೌದು, ನಾವಿಲ್ಲಿ ಹೇಳ ಹೊರಟಿರುವುದು ಬಾಲಿವುಡ್ ಚಿತ್ರರಂಗದ ಅದ್ಭುತ ನಟ ಇರ್ಫಾನ್ ಖಾನ್ ಅಭಿನಯದ ಕಾರ್ ವಾನ್ ಚಿತ್ರದ ಬಗ್ಗೆ. ಕಾರ್ವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಇಲ್ಲಿ ಜೀವನಕ್ಕೆ ಹತ್ತಿರವಾದ ವಿಷಯಗಳನ್ನು ಸಾವಿಗೆ ಸಂಬಂಧಿಸಿದ್ದನ್ನು ಹಾಸ್ಯಪ್ರಜ್ಞೆ ಮೂಲಕ ಇರ್ಫಾನ್ ಖಾನ್ ಮತ್ತು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್, ಬಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ದುಲ್ಕರ್ ಸಲ್ಮಾನ್ ಹೇಳಹೊರಟಿದ್ದಾರೆ.

ಚಿತ್ರದಲ್ಲಿ ಅವಿನಾಶ್(ದುಲ್ಕರ್), ಶೌಕತ್(ಇರ್ಫಾನ್ ಖಾನ್)ಮತ್ತು ತನ್ಯಾ(ಮಿತಿಲಾ ಪಲ್ಕರ್)ಒಟ್ಟಿಗೆ ಪ್ರಯಾಣ ಮಾಡುತ್ತಾರೆ. ಅವಿನಾಶ್ ನ ತಂದೆಯ ಶವ ಕೇರಳದ ಕೊಚ್ಚಿಯ ಮಹಿಳೆಯ ಶವದೊಂದಿಗೆ ಅದಲು ಬದಲಾಗಿರುತ್ತದೆ. ತಂದೆಯ ಶವಕ್ಕೋಸ್ಕರ ಅವಿನಾಶ್ ಮತ್ತು ಶೌಕತ್ ಕೇರಳದ ಕೊಚ್ಚಿಗೆ ಹೋಗುತ್ತಾರೆ. ರಸ್ತೆಯಲ್ಲಿ ನಡೆಯುವ ಕಥೆಯಿದು.

ಇಲ್ಲಿ ಪಾತ್ರಗಳು ಆಡುವ ಮಾತುಗಳು ಜೀವನಕ್ಕೆ ಹತ್ತಿರವಾಗಿ ಹೋಲುತ್ತವೆ. ಊಟಿ ನಾವು ಹೋಗುವ ಮಾರ್ಗದಲ್ಲಿಲ್ಲ. ಸಾವಿಗೆ ಅಳುವ ಸಂದರ್ಭದಲ್ಲಿ ರೊಮ್ಯಾನ್ಸ್ ಮಾಡಬೇಡ ಎಂದು ಹೇಳುವ ಇರ್ಫಾನ್ ಮಾತುಗಳು ಹಿಡಿಸುತ್ತವೆ. ಸಾವಿನ ಸಂದರ್ಭದಲ್ಲಿ ಹೇಗೆ ಜೀವನದಲ್ಲಿ ನಗುವುದನ್ನು ಕಲಿಯಬೇಕು ಎಂಬುದನ್ನು ಕಾರ್ವಾನ್ ಮೂಲಕ ತಿಳಿಯಬಹುದು. ವ್ಯಂಗ್ಯವೆಂದರೆ ಇರ್ಫಾನ್ ಖಾನ್ ನಿಜ ಜೀವನದಲ್ಲಿ ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು.

Comments are closed.