ರಾಷ್ಟ್ರೀಯ

ಡಯಟ್ ನಿಂದ 42 ಕೆಜಿ ತೂಕ ಇಳಿಸಿಕೊಂಡ 110 ಕೆಜಿಯ ಮಹಿಳೆ!

Pinterest LinkedIn Tumblr


ಬರೋಬರಿ 110 ಕೆಜಿ ತೂಕವಿದ್ದ ಅನುಪ್ರಿಯಾ ಆರೋಗ್ಯಕರ ಡಯಟ್ ಮೂಲಕ 42 ಕೆಜಿ ತೂಕ ಕಳೆದುಕೊಂಡು, ಆ ಡಯಟ್‌ ಸೀಕ್ರೆಟ್ ನಮ್ಮ ಜತೆ ಹಂಚಿಕೊಂಡಿದ್ದಾರೆ ನೋಡಿ:

ಹೆಸರು: ಅನುಪ್ರಿಯಾ ರಾಘವ್‌
ವೃತ್ತಿ: ಐಟಿ
ವಯಸ್ಸು: 34
ಮೊದಲು ಇದ್ದ ತೂಕ: 110 ಕೆಜಿ
ಕಳೆದುಕೊಂಡ ತೂಕ: 42 ಕೆಜಿ
ತೂಕ ಕಳೆದುಕೊಳ್ಳಲು ತೆಗೆದುಕೊಂಡ ಸಮಯ: 1 ವರ್ಷ

ತೂಕ ಕಳೆದುಕೊಳ್ಳಲು ನಿರ್ಧರಿಸಿದ್ದು ಯಾವಾಗ?
ಹೆಲ್ತಿ ಲೈಫ್‌ಸ್ಟೈಲ್ ಪ್ರಮೋಟ್‌ ಮಾಡುವ ಆನ್‌ಲೈನ್‌ ವೆಬ್‌ಸೈಟ್‌ ನೋಡಿದೆ. ಅದರಿಂದ ಸ್ಪೂರ್ತಿ ಪಡೆದ ನಾನು ತೂಕ ಕಳೆದುಕೊಳ್ಳಲು ನಿರ್ಧರಿಸಿದೆ.

ನನ್ನ ಬ್ರೇಕ್‌ಫಾಸ್ಟ್: ಬ್ಲ್ಯಾಕ್‌ ಕಾಫಿ ಜತೆ 3 ಬೇಯಿಸಿದ ಮೊಟ್ಟೆ ಹಾಗೂ 20 ಗ್ರಾಂ ಬಾದಾಮಿ.
ಲಂಚ್: 100 ಗ್ರಾಂ ಬೋನ್‌ಲೆಸ್‌ ಚಿಕನ್, 200 ಗ್ರಾಂ ತರಕಾರಿ ಮತ್ತು 1 ಕಪ್ ಮೊಸರು.
ಡಿನ್ನರ್: 100 ಗ್ರಾಂ ಅನ್ನ, 40 ಗ್ರಾಂ ಬೇಳೆ ಹಾಕಿ ಮಾಡಿದ ಬೇಳೆಸಾರು, 100 ಗ್ರಾಂ ಪನ್ನೀರ್.

ಚೀಟಿಂಗ್‌ ಡೇ: ತಿಂಗಳಿಗೆ ಒಂದು ಅಥವಾ ಎರಡು ಸಲ ಬಾಯಿರುಚಿಗೆ ಏನು ಬೇಕೋ ಅದನ್ನು ತಿನ್ನುತ್ತಿದ್ದೆ.

ವ್ಯಾಯಾಮ: ವಾರದಲ್ಲಿ 6 ದಿನ 90 ನಿಮಿಷ ಜೀರೋ ಕಾರ್ಡಿಯೋ ವ್ಯಾಯಾಮ ಮಾಡುತ್ತೇನೆ.
ಕಡಿಮೆ ಕ್ಯಾಲೋರಿಯ ಆಹಾರ: ಹೂಕೋಸು ರೈಸ್‌ ಹಾಗೂ ಪಾಲಕ್‌ ಪನ್ನೀರ್‌ ಟಿಕ್ಕಿ.

ಯಾವುದೇ ಕಾರಣಕ್ಕೆ ಕ್ರಾಶ್‌ ಡಯಟ್ ಮೊರೆ ಹೋಗಬೇಡಿ. ಹೊಟ್ಟೆ ಹಸಿದುಕೊಂಡು ತೂಕ ಕಡಿಮೆಯಾದರೆ ಅದು ಆರೋಗ್ಯಕರ ತೂಕ ಇಳಿಕೆ ಅಲ್ಲ. ಮಿತವಾದ ಡಯಟ್‌ ಪಾಲಿಸಿದರೆ ದಿನಾ ಚಿಕನ್‌ ಬಿರಿಯಾನಿ ತಿಂದರೂ ತೂಕ ಹೆಚ್ಚಾಗುವುದಿಲ್ಲ. ತೂಕ ಕಮ್ಮಿಯಾಗಲು ತಾಳ್ಮೆಯಿಂದ ಕಾಯಿರಿ.

ಆರೋಗ್ಯಕರ ಡಯಟ್ ಪಾಲಿಸಲಾರಂಭಿಸಿದೆ. ಉಪ್ಪು ತುಂಬಾ ಕಡಿಮೆ ಬಳಲಾರಂಭಿಸಿದೆ. ಸಕ್ಕರೆ ಸಂಪೂರ್ಣ ಬಿಟ್ಟೆ, ತುಪ್ಪ ಬದಲಿಗೆ ಆಲೀವ್ ಎಣ್ಣೆ ಬಳಸಲಾರಂಭಿಸಿದೆ, ಸೊಪ್ಪು, ತರಕಾರಿಯನ್ನು ನನ್ನ ಡಯಟ್‌ನಲ್ಲಿ ಹೆಚ್ಚಾಗಿ ಬಳಸಲಾರಂಭಿಸಿದೆ. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದೆ.

ನನ್ನ ಈ ಲೈಫ್‌ಸ್ಟೈಲ್‌ ತೂಕ ಇಳಿಕೆಗೆ ಸಹಾಯಮಾಡಿತು.

Comments are closed.