
ಸಂಭಾಲ್, ಉತ್ತರ ಪ್ರದೇಶ : ಪತ್ನಿಯೊಂದಿಗಿನ ಕ್ಷುಲ್ಲಕ ಜಗಳದ ಪರಾಕಾಷ್ಠೆಯಲ್ಲಿ ಕೋಪೋದ್ರಿಕ್ತನಾದ ಆಕೆಯ ಪತಿ ತನ್ನ ಒಂದು ವರ್ಷ ಪ್ರಾಯದ ಗಂಡು ಮಗುವನ್ನು ಕಾಲಿನಿಂದ ತುಳಿದು ಕೊಂದ ಅತ್ಯಮಾನುಷ ಘಟನೆ ಚಾಂದೋಸಿ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತ್ನಿ ಅಕಿಲಾ ಜತೆಗಿನ ಜಗಳದಲ್ಲಿ ಕೋಪೋದ್ರಿಕ್ತನಾದ ಪತಿ ಅರ್ಷದ್ ತನ್ನ ಒಂದು ವರ್ಷ ಪ್ರಾಯದ ಗಂಡು ಮಗು ಅರ್ಹಾನ್ ನನ್ನು ಕಾಲಿನಿಂದ ತುಳಿದು ಸ್ಥಳದಲ್ಲೇ ಸಾಯಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಕೊಂದ ಪಾತಕಿ ಅರ್ಷದ್ ನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.