ರಾಷ್ಟ್ರೀಯ

ಬೀದಿ ನಾಟಕ ಮಾಡುತ್ತಿದ್ದ ಮಹಿಳೆಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ಪಾಟ್ನಾ: ಕಳ್ಳಸಾಗಣೆ ವಿರೋಧಿ ಜಾಗೃತಿ ಅಭಿಯಾನ ಕೈಗೊಂಡಿದ್ದ ಐವರು ಮಹಿಳೆಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಕುಂಟಿ ಜಿಲ್ಲೆಯ ಕೊಚಂಗ್‌ ಬ್ಲಾಕ್‌ನಲ್ಲಿ ಮಾನವ ಕಳ್ಳಸಾಗಣೆ ವಿರೋಧಿಸಿ ಬೀದಿ ನಾಟಕ ನಡೆಸುತ್ತಿದ್ದ ಸ್ಥಳಕ್ಕೆ ಮೋಟರ್‌ ಸೈಕಲ್‌ನಲ್ಲಿ ಬಂದ ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡ ಮಹಿಳೆಯರನ್ನು ಅಪಹರಿಸಿದೆ.

ಕಾರಿನಲ್ಲಿ ಹತ್ತಿ ಕುಳಿತುಕೊಳ್ಳುವಂತೆ ಶಸ್ತ್ರ ತೋರಿಸಿ ಯಾರು ಇಲ್ಲದ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದಾದ ಮೂರು ಗಂಟೆಗಳ ನಂತರ ಮಹಿಳೆಯರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಎಸಗಿರುವುದನ್ನು ವಿಡಿಯೋ ಮಾಡಿಕೊಂಡಿರುವ ಆರೋಪಿಗಳು ವಿಷಯವನ್ನು ಬಹಿರಂಗಗೊಳಿಸಿದರೆ ವಿಡಿಯೋ ವೈರಲ್‌ ಮಾಡುವುದಾಗಿ ಮಹಿಳೆಯರಿಗೆ ಬೆದರಿಸಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ 9 ಜನರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Comments are closed.