ಕರ್ನಾಟಕ

ಶಾಸಕ ರಾಮ್‌ದಾಸ್‌ ಕಚೇರಿ ಮುಂದೆ ಪ್ರತ್ಯಕ್ಷವಾದ ಪ್ರೇಮ ಕುಮಾರಿ

Pinterest LinkedIn Tumblr


ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ.ರಾಮ್‌ದಾಸ್‌ ಅವರೊಂದಿಗಿನ ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಕುಮಾರಿ ಅವರು ಮತ್ತೆ ಹೋರಾಟಕ್ಕಿಳಿದಿದ್ದು, ನನಗೆ ಜೀವನ ಕೊಡಬೇಕು ಎಂದು ಗುರುವಾರ ಶಾಸಕರ ಕಚೇರಿಯ ಮುಂದೆ ಪ್ರತ್ಯಕ್ಷವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ದಿಢೀರ್‌ ವಿದ್ಯಾರಣ್ಯಪುರಂನ ಶಾಸಕರ ಕಚೇರಿಯ ಬಳಿ ಬಂದ ಪ್ರೇಮ ಕುಮಾರಿ ಶಾಸಕರು ನನಗೆ ಲೈಫ್ ನೀಡಬೇಕು.ನಾನು ಚುನಾವಣೆಯಲ್ಲಿ ಸ್ಪರ್ಧಿಸದೆ ಕೃಷ್ಣ ರಾಜ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆ. ಅವರಿಂದಾಗಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಕೆಲಸ ಕಳೆದುಕೊಂಡು ಪೋಷಕರ ಆಶ್ರಯದಲ್ಲಿದ್ದೇನೆ. ಅವರು ನನ್ನ ಪತಿ ಅವರು ನನಗೆ ಜೀವನ ನೀಡಿ ಪ್ರಕರಣಕ್ಕೆ ಶುಭಾಂತ್ಯ ಹಾಡಬೇಕು ಎಂದು ಕೇಳಿಕೊಂಡಿದ್ದಾರೆ.

ನಾನು ಪ್ರೇಮ ಕುಮಾರಿ ಅಲ್ಲ ಪ್ರೇಮಾ ರಾಮ್‌ದಾಸ್‌. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸದೆ ಲಿಂಗಾಯತರ ಮತಗಳು ವಿಭಜನೆಯಾಗದಂತೆ ನೋಡಿಕೊಂಡಿದ್ದೆ. ಅವರು ಗೆದ್ದಿದ್ದಾರೆ . ಈಗ ನನಗೆ ಮೋಸ ಆಗಬಾರದು,ಚುನಾವಣೆ ಮುಂಚೆ ನೀಡಿದ ಭರವಸೆಯಂತೆ ರಾಮ್‌ದಾಸ್‌ ಅವರು ನಡೆದುಕೊಳ್ಳಬೇಕು ಎಂದು ಕೇಳಿಕೊಂಡರು.

ಸ್ಥಳದಲ್ಲಿದ್ದ ಪೊಲೀಸರು ಪ್ರೇಮಾ ಅವರ ಮನವೊಲಿಸಿ ಸ್ಥಳದಿಂದ ತೆರಳುವಂತೆ ಮಾಡಿದ್ದಾರೆ.

Comments are closed.