ಉಡುಪಿ: ಕಳೆದ ನಾಲ್ಕು ವರ್ಷಗಳ ಹಿಂದೆ ತಾನು ಚಲಾಯಿಸುತ್ತಿದ್ದ ಕಾರ್ಗೋ ಕಿಂಗ್ ಗೂಡ್ಸ್ ವಾಹನವನ್ನು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ಆರೋಪ ಸಾಭೀತಾದ ಹಿನ್ನೆಲೆ ವಾಹನ ಚಾಲಕನಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

20-08-2014 ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಗೊ ಕಿಂಗ್ ವಾಹನ ಚಾಲಕನಾದ ಪ್ರಶಾಂತ್ ಪೈ ಎಂಬಾತ ಹಿರಿಯಡ್ಕ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ತನ್ನ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಉಡುಪಿ ತಾಲ್ಲೂಕು ಮುತ್ತೂರು ಕ್ರಾಸ್ ಎಂಬಲ್ಲಿ ಮುತ್ತೂರು ಕ್ರಾಸ್ ಕಡೆಯಿಂದ ಹಿರಿಯಡ್ಕ ಕಡೆಗೆ ಸಾರ್ವಜನಿಕ ಡಾಮರ ರಸ್ತೆಯಲ್ಲಿ ರಾಜು ಕೆ.ಎಸ್. ಹಾಗೂ ಟಿ.ಕೆ ಮದುಸೂದನ್ ತೆರಳುತ್ತಿದ್ದ ಬೈಕಿಗೆ ಡಿಕ್ಕಿಹೊಡೆದು ಅವರಿಗೆ ತೀವ್ರ ಸ್ವರೂಪದ ಗಾಯಗೊಳಿಸಿ ಗಾಯಾಳುಗಳನ್ನು ಆಸ್ವತ್ರೆಗೆ ದಾಖಲಿಸದೆ ಪೋಲಿಸರಿಗೆ ಮಾಹಿತಿಯನ್ನು ನೀಡದೇ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದ. ಈ ಬಗ್ಗೆ ಹಿರಿಯಡ್ಕ ಠಾಣೆಯ ಆಗಿನ ಉಪನಿರೀಕ್ಷಕ ರಫೀಕ್ ಎಂ. ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಮಾನ್ಯ ಉಡುಪಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುಧ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಇರ್ಫಾನ್ ಅವರು ಆರೋಪಿ ಪ್ರಶಾಂತ್ ಪೈಗೆ 2500ರೂ. ದಂಡ ವಿಧಿಸಿದ್ಧು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.