ಕರ್ನಾಟಕ

8ನೇ ತರಗತಿ ಓದಿರುವ ಜಿಟಿ ದೇವೇಗೌಡರ ಖಾತೆ ಬದಲಾವಣೆಗೆ ಕುಮಾರಸ್ವಾಮಿ ಒಲವು!

Pinterest LinkedIn Tumblr


ಬೆಂಗಳೂರು: ತಮಗೆ ನೀಡಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜಿಟಿ ದೇವೇಗೌಡರ ಖಾತೆ ಬದಲಾವಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಲವು ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಮೂವರ ನಡುವೆ ನಡೆದಿದ್ದ ಮಾತುಕತೆ ವೇಳೆ ಜಿಟಿಡಿ ಅವರು, ನಾನು ಕಲಿತದ್ದು 8ನೇ ತರಗತಿ ಹೀಗಾಗಿ ತನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ, ಬೇರೆ ಏನಾದರು ಕೊಡಿ ಎಂದು ಪ್ರಸ್ತಾಪಿಸಿದ್ದಾರೆನ್ನಲಾಗಿದೆ.

ತನಗೆ ಸಹಕಾರ ಅಥವಾ ಅಬಕಾರಿ ಖಾತೆ ಕೊಡಿ ಎಂದು ಜಿಟಿಡಿ ಸಿಎಂ ಬಳಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದರು. ಕಡಿಮೆ ಕಲಿತಿದ್ದರೂ, ಉನ್ನತ ಶಿಕ್ಷಣ ಸಚಿವ ಸ್ಥಾನ ಎಂದು ವ್ಯಂಗ್ಯವಾಡಿದ್ದರು. ಇದರಿಂದಾಗಿ ಜಿಟಿಡಿ ಉನ್ನತ ಶಿಕ್ಷಣ ಸಚಿವ ಸ್ಥಾನ ಕೈಬಿಟ್ಟು ಬಂಡೆಪ್ಪ ಕಾಶೆಂಪುರ್ ಅವರ ಬಳಿ ಇರುವ ಸಹಕಾರ ಖಾತೆ ಕೊಡುವ ಬಗ್ಗೆ ಸಿಎಂ ಚಿಂತನೆ ನಡೆಸಿರುವುದಾಗಿ ವರದಿ ತಿಳಿಸಿದೆ.

Comments are closed.