
ಬೆಂಗಳೂರು: ತಾವರಕೆರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿ, ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಆರೋಪದಡಿ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ವಿಜಯ್, ಅತ್ತಿಬೆಲೆ ಸಮೀಪದ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ರೆಸಾರ್ಟ್ಗೆ ಹೋದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಅವರನ್ನು ಬಂಧಿಸಿದ್ದಾರೆ.
‘ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ಮೃತಪಟ್ಟ ಪ್ರಕರಣದ ವಿಚಾರಣೆಗೆ ಆರೋಪಿಯಾದ ನಿರ್ಮಾಪಕ ಪಿ.ಸುಂದರಗೌಡ ಹಾಜರಾಗಿರಲಿಲ್ಲ. ಆತನ ಬಂಧನಕ್ಕೆ ರಾಮನಗರ ಕೋರ್ಟ್ ವಾರಂಟ್ ಹೊರಡಿಸಿತ್ತು. ಆತನನ್ನ ಬಂಧಿಸಲು ತಾವರಕೆರೆ ಪೊಲೀಸರು, ಚೆನ್ನಮ್ಮನ ಅಚ್ಚುಕಟ್ಟು ಕೆರೆ ಬಳಿಯ ಮನೆಗೆ ಹೋಗಿದ್ದರು. ಅಲ್ಲಿಗೆ ಹೋಗಿದ್ದ ವಿಜಯ್, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಸದ್ಯ ತಲೆಮರೆಸಿಕೊಂಡಿರುವ ನಿರ್ಮಾಪಕ ಸುಂದರ್ ಗೌಡಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Comments are closed.