ಕರಾವಳಿ

ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ಕಾಮಾತ್‍‌ರಿಂದ ನೆರೆ ಪೀಡಿತ ಪ್ರದೇಶಗಳ ಅವಲೋಕನ ; ಸೂಕ್ತ ಪರಿಹಾರದ ಭರವಸೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಮಂಗಳವಾರ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

ಬಿಜೈ ಆನೆಗುಂಡಿ ಪ್ರದೇಶದಲ್ಲಿ ಸುಮಾರು 32 ಮನೆಗಳಿಗೆ ಹಾನಿಯಾಗಿವೆ. ಕದ್ರಿ ಪ್ರದೇಶದಲ್ಲಿ ಸುಮಾರು 10 ಸ್ಥಳಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಶಕ್ತಿನಗರ. ಕುಂಟಲ್ಪಾಡಿ ಪ್ರದೇಶದಲ್ಲಿ 5 ಮನೆಗಳಿಗೆ ಹಾನಿಯಾಗಿವೆ. ಸರಿಪಳ್ಳದಲ್ಲಿ ಕೂಡ ಕೃತಕ ನೆರೆಯಿಂದ ಮನೆಗಳಿಗೆ ಹಾನಿಯಾಗಿದೆ. ಸುಮಾರು 10 ವಾರ್ಡ್ ಗಳ ಈ ಎಲ್ಲಾ ಪ್ರದೇಶಗಳಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಭೇಟಿ ನೀಡಿದ ಶಾಸಕರು ಸೂಕ್ತ ಪರಿಹಾರ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.

ಸುಮಾರು 500 ಕ್ಕೂ ಅಧಿಕ ಸಂತ್ರಸ್ಥರಿಗೆ ವಸತಿ ಮತ್ತು ಆಹಾರ ಪೂರೈಕೆ ವ್ಯಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಮಧ್ಯಾಹ್ನದ ಬಳಿಕ ಇನ್ನೂ 28 ವಾರ್ಡ್ ಗಳಿಗೆ ಭೇಟಿ ನೀಡಿದರು.. ಈಗಾಗಲೇ ನಗರದಲ್ಲಿ 1,500 ಕ್ಕೂ ಅಧಿಕ ಜನರಿಗೆ ತೀವ್ರ ತೊಂದರೆಗಳಾಗಿದ್ದು ಸಾರ್ವಜನಿಕರು , ಜಿಲ್ಲಾಡಳಿತ , ಪೊಲೀಸ್ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡುತಿದ್ದಾರೆ ಎಂದು ಈ ವೇಳೆ ಶಾಸಕರು ತಿಳಿಸಿದ್ದಾರೆ.

ಮಂಗಳವಾರ ಸುರಿದ ಭಾರೀ ಮಳೆಗೆ ನಗರದ ಜ್ಯೋತಿ ವೃತ್ತ , ಕೆ.ಎಂ.ಸಿ ಆಸ್ಪತ್ರೆ, ಪಡೀಲ್ ರೈಲ್ವೆ ಅಂಡರ್ ಪಾಸ್, ಕೊಡಿಯಾಲ್ ಬೈಲ್,ಕೊಟ್ಟಾರ ಮುಂತಾದ ಕಡೆ ಜನ ಸಂಚಾರ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ರಸ್ತೆಯಲ್ಲೇ ನದಿಯಂತೆ ನೀರು ನಿಂತಿದ್ದು ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು.. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮಾತ್ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.​

Comments are closed.