ರಾಷ್ಟ್ರೀಯ

ಸುನಂದಾ ಪುಷ್ಕರ್‌ ಕೊಲೆ ಪ್ರಕರಣ: ಆರೋಪಿ ಪತಿ ಶಶಿ ತರೂರ್‌ ಗೆ ಜೂ.5ಕ್ಕೆ ಸಮನ್ಸ್‌ ನಿರ್ಧಾರ

Pinterest LinkedIn Tumblr


ಹೊಸದಿಲ್ಲಿ : ಸುನಂದಾ ಪುಷ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ, ಕಾಂಗ್ರೆಸ್‌ ನಾಯಕ, ಶಶಿ ತರೂರ್‌ ಅವರಿಗೆ ಸಮನ್ಸ್‌ ಜಾರಿ ಮಾಡುವ ಬಗೆಗಿನ ತನ್ನ ಆದೇಶವನ್ನು ದಿಲ್ಲಿ ನ್ಯಾಯಾಲಯ ಜೂನ್‌ 5ಕ್ಕೆ ಕಾಯ್ದಿರಿಸಿದೆ.

ತರೂರ್‌ ಅವರಿಗೆ ಸಮನ್ಸ್‌ ಜಾರಿ ಮಾಡುವ ವಿಷಯದಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ಪ್ರಾಸಿಕ್ಯೂಶನ್‌ ಪರ ವಕೀಲರು ಕೋರ್ಟಿಗೆ ಮನವರಿಕೆ ಮಾಡಿರುವುದನ್ನು ಅನುಸರಿಸಿ ಅಡಿಶನಲ್‌ ಚೀಫ್ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಅವರು ಈ ಬಗೆಗಿನ ತಮ್ಮ ಆದೇಶವನ್ನು ಜೂನ್‌ 5ಕ್ಕೆ ಕಾಯಯ್ದಿರಿಸಿದರು.

ಸುನಂದಾ ಪುಷ್ಕರ್‌ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅವರ ಪತಿ ಶಶಿ ತರೂರ್‌ ಕುಮ್ಮಕ್ಕು ನೀಡಿದ್ದರು ಎಂದು ಕಳೆದ ಮೇ 14ರಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು. ನಾಲ್ಕೂವರೆ ವರ್ಷಗಳಷ್ಟು ಹಳೆಯ ಈ ಕೇಸಿನಲ್ಲಿ ತರೂರ್‌ ಬಳಿ ಸಾಕಷ್ಟು ಪುರಾವೆಗಳಿರುವ ಕಾರಣ ಅವರಿಗೆ ಸಮನ್ಸ್‌ ನೀಡುವಂತೆ ಪ್ರಾಸಿಕ್ಯೂಶನ್‌ ಒತ್ತಾಯಿಸಿತ್ತು.

Comments are closed.