
ಮಂಡ್ಯ : ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಆದರೆ ಮಂಡ್ಯ ಕ್ಷೇತ್ರದ ಶಾಸಕ, ನಟ ಅಂಬರೀಷ್ ಅವರ ಹೆಜ್ಜೆಯನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಬೇಕಾದ ಸಂದರ್ಭ ಇದು.
ಕಾಂಗ್ರೆಸ್ ಮೇಲಿನ ಮುನಿಸಿನಿಂದ ಅನಾರೋಗ್ಯದ ಕಾರಣ ಒಡ್ಡಿ ಈ ಬಾರಿಯ ವಿಧಾನಸಭಾ ಚುನಾವಣೆಯ ಸ್ಪರ್ಧೆಯಿಂದ ಹೊರಗುಳಿದಿರುವ ಅಂಬರೀಷ್ ಅವರಿಂದು ಜೆಡಿಎಸ್ ನಾಯಕರ ಕಾರಿನಲ್ಲಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿರುವುದು ಅನೇಕರಿಗೆ ಒಗಟಾಗಿ ಕಾಡಿದೆ.
ಅಂಬರೀಷ್ ಅವರು ಡಿ ಸಿ ತಮ್ಮಣ್ಣ ಅವರ ಕಾರಿನಲ್ಲಿ ಅಗಮಿಸಿ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಇಂದು ಶನಿವಾರ ತಮ್ಮ ಮತ ಹಕ್ಕು ಚಲಾಯಿಸಿದರು.
ಅಂಬರೀಷ್ ಅವರು ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಯುವಕರು ಜೈಕಾರ ಹಾಕಿ ಅವರನ್ನು ಸ್ವಾಗತಿಸಿದರು. ಅಂಬರೀಷ್ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಪ್ರಕಟಿಸಿ ಜೆಡಿಎಸ್ ಬೆಂಬಲಿಸಿರುವುದು ಗಮನಾರ್ಹವಾಗಿದೆ.
Comments are closed.