
ಮದುವೆ ಎಂದರೆ ಸಂಭ್ರಮ. ವಧು ವರರು, ಸಂಬಂಧಿ ಗಳು ಸಡಗರದಿಂದ ಮದುವೆಯಲ್ಲಿ ಭಾಗಿಯಾಗಿರುತ್ತಾರೆ. ಜೀವಮಾನಪೂರ್ತಿ ನೆನಪಿಟ್ಟುಕೊಳ್ಳುವಂಥ ಸಮಾರಂಭ ಅದು. ಆದರೆ ಕರೆಯದೇ ಬಂದ ಅತಿಥಿಯಿಂದ ಈ ಎಲ್ಲಾ ಸಡಗರ ಸಂಭ್ರಮ ಹಾಳಾದರೆ ಏನು ಗತಿ? ಅದೂ ಕೂಡ
ಅತಿಥಿಗಳು ಭಯದಲ್ಲಿ ಮದುವೆ ಮಂಟಪ ಬಿಟ್ಟು ಓಡಿ ಹೋದರೆ?
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹುಲಿಯೊಂದು ಏಕಾಏಕಿ ಮದುವೆ ಮಂಟಪಕ್ಕೆ ಭೇಟಿ
ಕೊಟ್ಟು ಮದುವೆ ಸಂಭ್ರಮ ಹಾಳು ಮಾಡಿದೆ. ಆಹ್ವಾನ ಇಲ್ಲದೇ ಬಂದ ಈ ಅತಿಥಿ ಮಂಟಪದ ಬಳಿಯಿದ್ದ ಕುರು ಚಲು ಗಿಡಗಳ ಮರೆಯಿಂದ ಘರ್ಜಿಸುತ್ತಾ ಒಳಬಂದಿದೆ. ಅತಿಥಿಗಳು ಹುಲಿಯಿಂದ ತಪ್ಪಿಸಿಕೊಳ್ಳಲು ಒಂದೇ ಸಮನೆ ಓಡಲಾರಂಭಿಸಿದರು. ಒಂದು ಕ್ಷಣ ಮದುವೆ ಮನೆ
ಅಕ್ಷರಶಃ ಆರ್ಥನಾದದಿಂದ ತುಂಬಿಹೋಯಿತು. ಹುಲಿ ಕೂಡ ಎಲ್ಲೆಂದರಲ್ಲಿ ಓಡಾಡಿ ನೀರಿನ ಪಾತ್ರೆ, ಅಡುಗೆ ಪಾತ್ರೆಗಳನ್ನು ಕೆಡವಿದೆ. ಬಳಿಕ ಇದು ಮಹಾರಾಷ್ಟ್ರದಲ್ಲಿ 600 ಕಿಮೀ ಓಡಾಡಿದೆ.
ಮದುವೆ ಮನೆಗೆ ಹುಲಿ ದಾಳಿ ಮಾಡಿದ್ದನ್ನು ಛಾಯಾಚಿತ್ರಕಾರ ಧೈರ್ಯವಾಗಿ ಸೆರೆಹಿಡಿದಿದ್ದಾರೆ. ಅದೀಗ ವೈರಲ್ ವಿಡಿಯೋ.
Comments are closed.