ಕರಾವಳಿ

ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಮಂಗಳೂರಿನಲ್ಲಿ ಬ್ರಹತ್‌ ರೋಡ್ ಶೋ

Pinterest LinkedIn Tumblr

ಮಂಗಳೂರು: ಭಾ.ಜ.ಪಾ. ದ ರಾಷ್ಟ್ರೀಯ‌ ಅದ್ಯಕ್ಷರಾದ ಅಮಿತ್ ಶಾ ಅವರು ದಿನಾಂಕ 08-05-2018ರಂದು ಮಂಗಳೂರು, ಮಂಗಳೂರು ನಗರ ದಕ್ಷಿಣ ಮತ್ತು‌ ಉತ್ತರ ಕ್ಶೇತ್ರದಲ್ಲಿ ಬ್ರಹತ್‌ ರೋಡ್ ಶೋ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಕಾರ್ಯಕ್ರಮದ ವಿವರ :

1. ಮಧ್ಯಾಹ್ನ 12.45 ವಿಮಾನ ನಿಲ್ದಾಣಕ್ಕೆ ಆಗಮನ – ಸ್ವಾಗತ.
2. ಊಟ ವಿಶ್ರಾಂತಿ 2.15ರ ವರೆಗೆ.
3. ಮಧ್ಯಾಹ್ನ 2.30 ಕ್ಕೆ ಮಂಗಳೂರು ಕ್ಶೇತ್ರದಭಾ.ಜ.ಪಾ. ಕಚೇರಿಯಿಂದ ತೊಕ್ಕೊಟ್ಟು ನಾಗ ಕಟ್ಟೆಯ ವರೇಗೆ ರೋಡ್ ಶೋ.
4. ಮಧ್ಯಾಹ್ನ 3.45ರಿಂದ ಮಂಗಳೂರು ನಗರ ದಕ್ಷಿಣ ಕ್ಸೇತ್ರದ ನವಭಾರತ ವ್ರತ್ತದಿಂದಕೆ.ಎಸ್. ರಾವ್‌ರಸ್ತೆ, ಪಿ.ಎಮ್. ರಸ್ತೆ ಮೂಲಕ ಕಾರ್ ಸ್ಟ್ರೀಟ್‌ ಟೆಂಪಲ್ ಸ್ಕ್ವೇರ್ ವರೆಗೆ ರೋಡ್ ಶೋ.
5. ಮಧ್ಯಾಹ್ನ 4.45ರಿಂದ ಮಂಗಳೂರು ನಗರ‌ ಉತ್ತರ ಕ್ಷೇತ್ರದ ಭಾ.ಜ.ಪಾ. ಕಛೇರಿಯಿಂದ ಮರಕಡದ ವರೇಗೆ ರೋಡ್ ಶೋ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾಯ ಕ್ಷೇತ್ರದ ಪಕ್ಷದಕಾರ್ಯಕರ್ತರು,ಸದಸ್ಯರು, ಅಭಿಮಾನಿಗಳು ಮತ್ತುಸಾರ್ವಜನಿಕರು‌ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಸಂಚಾಲಕರಾದ ಮೊನಪ್ಪ ಭಂಡಾರಿ, ಸಂಸದ ನಳಿನ್ ಕುಮಾರ್‌ ಕಟೀಲ್, ವಿಧಾನ ಪರಿಷತ್ ಸದಸ್ಯ ಗಣೇಶ್‌ಕಾರ್ನಿಕ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.