ರಾಷ್ಟ್ರೀಯ

ಪ್ರಧಾನಿ ಮೋದಿ, ಅಂಬೇಡ್ಕರ್‌ ‘ಬ್ರಾಹ್ಮಣರು’: ಗುಜರಾತ್‌ ಸ್ಪೀಕರ್‌ ಹೇಳಿಕೆ

Pinterest LinkedIn Tumblr


ಗಾಂಧಿನಗರ: ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರು ನಿಜ ಅರ್ಥದಲ್ಲಿ ‘ಬ್ರಾಹ್ಮಣ’ ಎಂದು ಗುಜರಾತ್‌ ವಿಧಾನಸಭೆ ಸ್ಪೀಕರ್‌ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.

‘ಬ್ರಾಹ್ಮಣ ಉದ್ಯಮಿಗಳ ಬೃಹತ್ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ‘ಬಿ.ಆರ್. ಅಂಬೇಡ್ಕರ್‌ ಒಬ್ಬ ಬ್ರಾಹ್ಮಣ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಸ್ವಯಂ ಅಧ್ಯಯನದಿಂದ ಉತ್ತಮ ಜ್ಞಾನಿಗಳಾದವರನ್ನು ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬ ಬ್ರಾಹ್ಮಣ ಎಂದು ನಾನು ಹೇಳುತ್ತೇನೆ’ ಎಂದು ತ್ರಿವೇದಿ ನುಡಿದರು.

ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ದಲಿತ ಕುಟುಂಬದಲ್ಲಿ ಜನಿಸಿ, ಸಮುದಾಯದ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಡಿದವರು. ಸ್ವಯಂ ಅಧ್ಯಯನದಿಂದ ಮೇಲೆ ಬಂದು ಸಂವಿಧಾನ ನಿರ್ಮಾತೃಗಳಾಗುವ ಮಟ್ಟಕ್ಕೆ ಏರಿದವರು.

ದಲಿತ-ಬೌದ್ಧ ಆಂದೋಲನದ ಹಿಂದಿನ ಶಕ್ತಿಯಾಗಿರುವ ಅಂಬೇಡ್ಕರ್ ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು. ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿಯೂ ಅವರು ಹೋರಾಡಿದ್ದರು.

Comments are closed.