ಕರ್ನಾಟಕ

ಜೈನ್‌ ಆಗಿದ್ರೂ ಹಿಂದು ಅಂತಾರೆ, ಶಾ ಹೇಳುವುದೆಲ್ಲ ಸುಳ್ಳು; ಸಿಎಂ ಕಿಡಿ

Pinterest LinkedIn Tumblr


ವಿಜಯಪುರ: ‘ಅಮಿತ್‌ ಶಾ ಅವರು ಜೈನ್‌ ಆಗಿದ್ದರೂ ನಾನು ಹಿಂದು ಅನ್ನುತ್ತಾರೆ.ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕಿಡಿ ಕಾರಿದ್ದಾರೆ.

ಮರಾಠಿ ಬರಲ್ಲ ಅಂದ್ರೆ ತಪ್ಪಾ?
‘ನಾನು ಕನ್ನಡಿಗ, ಕನ್ನಡದ ಮೇಲೆ ಬದ್ಧತೆ ಇಟ್ಟಕೊಂಡವ. ನನ್ನಷ್ಟು ಬದ್ಧತೆ ಇಟ್ಟುಕೊಂಡವರು ಸಿಗಲಿಕ್ಕಿಲ್ಲ. ಮರಾಠಿ ಬರುವುದಿಲ್ಲ ಅನ್ನುವುದು ತಪ್ಪಾ’ ಎಂದು ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಿಡಿ ಕಾರಿದರು.

‘ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ.ಆಗ ಅಮಿತ್‌ ಶಾ ಬಂದಿದ್ದರಾ’ ಎಂದು ಪ್ರಶ್ನಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಸಮಸ್ಯೆಯೇ ಅಲ್ಲ’ ಎಂದ ಅವರು ‘ಬಿಜೆಪಿಯವರಿಗೆ ಅಪಪ್ರಚಾರ ಮಾಡುವುದೇ ಒಂದು ಕೆಲಸ’ ಎಂದರು.

ಕುಮಾರಸ್ವಾಮಿ ಮತ್ತು ಶಾ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ ಎಂದು ಉಪುನರುಚ್ಛರಿಸಿದ ಸಿಎಂ ‘ನಾನು ಜಮೀರ್‌ ಅಹಮದ್‌ ಖಾನ್‌ ಜೊತೆ ಪಾಕಿಸ್ತಾನಕ್ಕೆ ಹೋಗಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ತೆರಳಲು ವೀಸಾ ಬೇಕು. ನಾನು ಪಾಕಿಸ್ತಾನಕ್ಕೆ ಹೋಗಿಲ್ಲ’ ಎಂದರು.

-ಉದಯವಾಣಿ

Comments are closed.