
ಅರೇಂಜ್ ಮ್ಯಾರೇಜ್ ಆದ ಸಂದರ್ಭದಲ್ಲಿ ಮದುವೆಯ ಮೊದಲ ರಾತ್ರಿ ಎಷ್ಟು ವಿಶೇಷವಾಗಿ ರುತ್ತದೋ, ಅಷ್ಟೇ ವಿಭಿನ್ನವೂ ಆಗಿರುತ್ತದೆ. ಇಬ್ಬರ ಮನಸ್ಸಿನಲ್ಲಿಯೂ ಹಲವಾರು ವಿಧವಾದ ಆಲೋಚನೆಗಳು ಸುಳಿದಾಡುತ್ತಿರುತ್ತದೆ. ಆದರೆ, ಯಾವ ರೀತಿ ಆರಂಭಿಸಬೇಕು, ಏನು ಮಾತನಾಡಬೇಕು ಎಂಬುದು ಮಾತ್ರ ಇಬ್ಬರಿಗೂ ತಿಳಿದಿರುವುದಿಲ್ಲ. ಈ ಸಮಯವನ್ನು ಕಂಫರ್ಟೇಬಲ್ ಆಗಿ ಮಾಡಲು ಹಾಗೂ ರೊಮ್ಯಾಂಟಿಕ್ ಆಗಿ ಬದಲಾಯಿಸಲು ಈ ವಿಧಾನಗಳನ್ನು ಅನುಸರಿಸಬಹುದು…
ಮೊದಲ ರಾತ್ರಿಗೆ ತಯಾರಾಗಿ :
ಈ ರಾತ್ರಿಯ ಕುರಿತಾಗಿ ಮದುವೆಯಾಗುವ ಪ್ರತಿಯೊಬ್ಬರು ಮದುವೆಗೆ ಮೊದಲೆ ಕನಿಷ್ಠ ನೂರು ಬಾರಿಯಾದರು ತಮ್ಮ ಕಲ್ಪನೆಗಳನ್ನು ಹರಿಯಬಿಟ್ಟಿರುತ್ತಾರೆ. ಆದರೂ ಈ ರಾತ್ರಿಯನ್ನು ಪರಿಪೂರ್ಣಗೊಳಿಸಲು ಮತ್ತು ಅತಿ ನಿರೀಕ್ಷಿತ ರಾತ್ರಿಯ ಕುರಿತಾದ ಉದ್ವೇಗವನ್ನು ನಿಭಾಯಿಸಲು ನೀವು ರೆಡಿಯಾಗಿ.
ಮಾತನಾಡಲು ಆರಂಭಿಸಿ :
ಅವರ ಬಳಿ ನಿಮ್ಮ ಸ್ನೇಹಿತರು ಮತ್ತು ಇಷ್ಟಾನಿಷ್ಟಗಳ ಬಗ್ಗೆ ಮಾತನಾಡಿ. ನಿಮ್ಮ ಸಂಗಾತಿಯ ನಿರೀಕ್ಷೆಗಳ ಕುರಿತಾಗಿ ಸ್ಪಷ್ಟತೆಯನ್ನು ಪಡೆದುಕೊಳ್ಳಿ. ಇದರಿಂದ ಫಸ್ಟ್ನೈಟ್ನಲ್ಲಿ ಕಂಫರ್ಟೇಬಲ್ ಆಗಿರಲು ಸಹಾಯವಾಗುತ್ತದೆ.
ಅವಿಸ್ಮರಣೀಯಗೊಳಿಸಿ :
ಕೊನೆಗೂ ಮದುವೆಯ ಎಲ್ಲಾ ಸಂಪ್ರದಾಯಗಳು ಮಗಿದು ನೀವು ಕನಸು ಕಾಣುತ್ತಿದ್ದ ಸಮಯ ಬಂದಾಗಿದೆ. ಈಗ ನೀವು ನಿಮ್ಮ ಬಾಳಿನ ಮಧುರ ಕ್ಷಣಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಸವಿಯಲು ಸಿದ್ಧರಾಗಿದ್ದೀರಿ. ಸೋ ಆ ಕ್ಷಣವನ್ನು ಅವಿಸ್ಮರಣೀಯವಾಗಿಸುವ ಕೆಲಸ ಮಾಡಿ.
ಸರ್ಪ್ರೈಸ್ ಗಿಫ್ಟ್ ನೀಡಿ :
ಮೊದಲ ರಾತ್ರಿಯಂದು ನಿಮ್ಮ ಸಂಗಾತಿಗೆ ಗಿಫ್ಟ್ ನೀಡಿ ಆಕೆ/ಆತ ಖುಶಿಯಾಗುವಂತೆ ಮಾಡಿ. ಇದರಿಂದ ನಿಮ್ಮ ಮೊದಲ ರಾತ್ರಿಯ ಆರಂಭ ಸುಂದರವಾಗಿರುತ್ತದೆ. ಗಿಫ್ಟ್ಗಳು ಎಂದರೆ ನೀವೆ ರಚಿಸಿದ ಕವಿತೆ, ಹೂ ಗುಚ್ಛ ಒಂದು ರೊಮ್ಯಾಂಟಿಕ್ ಗಿಫ್ಟ್ ಬಾಸ್ಕೆಟ್ ಮುಂತಾದವು ಖಂಡಿತವಾಗಿ ನಿಮ್ಮ ಸಂಗಾತಿಯನ್ನು ರೋಮಾಂಚನಗೊಳಿಸುತ್ತವೆ.
ರೊಮ್ಯಾಂಟಿಕ್ ಆಗಿ ಮಾತನಾಡಿ :
ನಿಮ್ಮ ಮಧುರ ಕ್ಷಣವನ್ನು ಸವಿಯಲು ಆರಂಭಿಸುವ ಮೊದಲು ರೊಮ್ಯಾಂಟಿಕ್ ಮಾತುಕತೆ ನಡೆಸಿ. ಸ್ವಲ್ಪ ತಾಳ್ಮೆ ಇರಲಿ, ನೀವಿಬ್ಬರು ವರ್ಷಗಳಿಂದ ಪರಿಚಯ ಹೊಂದಿದ್ದರು, ಮೊದಲು ಒಂದು ಭಾವನಾತ್ಮಕ ಭಾಂದವ್ಯವನ್ನು ಬೆಳೆಸಿ. ಆಗ ನಿಮ್ಮಿಬ್ಬರ ಸಂಬಂಧ ಶುರುವಿನಿಂದಲೆ ಗಟ್ಟಿಗೊಳ್ಳುವುದರಲ್ಲಿ ಸಂಶಯವಿಲ್ಲ.
ಪ್ರತಿ ನಿಮಿಷವನ್ನು ಎಂಜಾಯ್ ಮಾಡಿ :
ನಿಮ್ಮ ಸಂಗಾತಿಗೆ ನಿಧಾನವಾಗಿ ಕಿಸ್ ಮಾಡಿ. ಅಥವಾ ಅಲ್ಲೇ ಇಟ್ಟಿರುವ ಸಿಹಿ ತಿನಿಸು ಅಥವಾ ಹಣ್ಣುಗಳನ್ನು ನಿಮ್ಮ ಕೈಯಾರ ಅವರಿಗೆ ತಿನ್ನಿಸಿ. ಹೀಗೆ ನಿಮ್ಮ ಮಿಲನ ಪೂರ್ವ ಚಟುವಟಿಕೆಗಳು ಶುರುವಾಗಲಿ. ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ನಿಮ್ಮ ರಾತ್ರಿಯನ್ನು ಕಳೆಯಿರಿ. ಪ್ರತಿ ನಿಮಿಷವನ್ನು ಸಹ ಎಂಜಾಯ್ ಮಾಡಿ.
ಈ ಟಿಪ್ಸ್ಗಳನ್ನು ಅನುಸರಿಸಿದರೆ ನಿಮ್ಮ ಮೊದಲ ರಾತ್ರಿ ನಿಮಗೆ ಜೀವನ ಪರ್ಯಂತ ಮಧುರ ಅನುಭವ ನೀಡುವುದರಲ್ಲಿ ಸಂಶಯವಿಲ್ಲ..
Comments are closed.