ಮನೋರಂಜನೆ

ಸಿಕ್ಕಾಪಟ್ಟೆ ವೈರಲ್ ಆದ “ರ್‍ಯಾಂಬೋ 2’ನ “ಚುಟು ಚುಟು ಅಂತೈತಿ’ ಹಾಡು

Pinterest LinkedIn Tumblr


ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ “ಧಮ್​ ಮಾರೋ ಧಮ್’, “ಯವ್ವ- ಯವ್ವ’ ಹಾಗೂ “ಬಿಟ್ಟೋಗ್ಬೇಡ’ ಹಾಡುಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಸಾಲಿಗೆ ಮತ್ತೊಂದು ಸೇರ್ಪಡೆ “ಚುಟು ಚುಟು ಅಂತೈತಿ’ ಹಾಡು. ಹೌದು ಶರಣ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯ “ರ್‍ಯಾಂಬೋ 2′ ಹಾಡನ್ನು ಯೂ ಟ್ಯೂಬ್’ನಲ್ಲಿ 20 ಲಕ್ಷಕ್ಕೂ ಅಧಿಕ ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಾಡಿನಲ್ಲಿ “ಏ ಹುಡುಗಿ ಯಾಕಿಂಗಾಡ್ತಿ…ಮಾತಲ್ಲೇ ಮಳ್ಳು ಮಾಡ್ತಿ’ ಅಂತ ಶರಣ್, ಆಶಿಕಾ ಜೊತೆ ಸೂಪರ್ ಆಗಿ ಸ್ಟೆಫ್ ಹಾಕಿದ್ದಾರೆ. ಅಷ್ಟೇ ಅಲ್ಲ, ಇದೊಂದು ಸೂಪರ್ ಕಲರ್ ಫುಲ್ ಸಾಂಗ್ ಕೂಡ ಹೌದು. ಯಾವ ಬಾಲಿವುಡ್, ಟಾಲಿವುಡ್’ಗೂ ಕಡಿಮೆ ಇಲ್ಲ ಅನ್ನೂ ರೀತಿಯಲ್ಲಿ ಸೆಟ್ ಹಾಕಿ, ಸ್ಟೆಪ್ ಹಾಕಿ, ಕಾಸ್ಟ್ಯೂಮ್ ಹಾಕಿ ಕೊರಿಯೋಗ್ರಫಿ ಮಾಡಿರೋ ಈ ಸಾಂಗ್ ಎಷ್ಟು ಸಾರಿ ನೋಡಿದರೂ ಮತ್ತೊಮ್ಮೆ ನೋಡಬೇಕು ಅನ್ನೂ ಹಾಗೆ ಮಾಡುತ್ತೆ.

ಒಂದು ರೀತಿಯಲ್ಲಿ ಈ ಹಾಡು ವೀಕ್ಷಕರ ಕಣ್ಣಿಗೆ ಹಬ್ಬ ಇದ್ದಂತೆ ಅಂತಾನೇ ಹೇಳಬಹುದು. ಕೊರಿಯೋಗ್ರಾಫರ್​​ ಭೂಷಣ್​ ಈ ಹಾಡಿಗೆ ಕೊರಿಯೋಗ್ರಾಫ್​ ಮಾಡಿದ್ದಾರೆ. ಅರ್ಜುನ್​ ಜನ್ಯಾ ಮ್ಯೂಸಿಕ್​ ಕಂಪೋಸ್​ ಮಾಡಿರೋ ಈ ಹಾಡಿಗೆ ಶಿವು ಬೆರ್ಗಿ ಸಾಹಿತ್ಯ​ ಬರೆದಿದ್ದಾರೆ. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರ್ಗವಿ ಧ್ವನಿ ಈ ಹಾಡಿನ ಮೋಡಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಶರಣ್‌ ತಮ್ಮ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಛಾಯಾಗ್ರಾಹಕ ಸುಧಾಕರ್‌ ರಾಜ್‌, ಸಂಕಲನಕಾರ ಕೆ.ಎಂ. ಪ್ರಕಾಶ್‌, ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಕ್ರಿಯೇಟಿವ್‌ ಹೆಡ್‌ ತರುಣ್‌ ಸುಧೀರ್‌ ಇವರೆಲ್ಲಾ ವರ್ಕಿಂಗ್‌ ಪಾಟ್ನರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್‌ ಸಿಗಲಿದೆಯಂತೆ. ಈ ಹಿಂದೆ “ದಿಲ್‌ವಾಲ’ ಚಿತ್ರ ಮಾಡಿದ್ದ ಅನಿಲ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಚಿತ್ರದ ನಾಯಕನನ್ನು ಪರಿಚಯಿಸುವ ಹಾಡಿನಲ್ಲಿ ಈ ಹಿಂದೆ ಶರಣ್ ಜೊತೆ ಅಭಿನಯಿಸಿದ್ದ ಶ್ರುತಿ ಹರಿಹರನ್, ಶುಭಾಪೂಂಜಾ, ಭಾವನಾ ರಾವ್, ಸಂಚಿತಾ ಪಡುಕೋಣೆ ಮತ್ತು ಮಯೂರಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದು, ಶರಣ್ ಜೊತೆ ಹೆಜ್ಜೆ ಹಾಕಿದ್ದಾರೆ.

-ಉದಯವಾಣಿ

Comments are closed.