ಉಡುಪಿ: ಯುವಕನೋರ್ವನಿಗೆ ಮಣಿಪಾಲದ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಣಿಪಾಲದ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ ತಂದೆ ತಾಯಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಾರ್ಚ್ 25 ರಂದು ಮಣಿಪಾಲದ ಪ್ರೋಫೆಸರ್ ಚಂದ್ರಕಾಂತ್ ಎನ್ನುವವರು ಮಣಿಪಾಲದ. ಸ್ಟೇಟ್ ಬ್ಯಾಂಕ್ ಬಳಿ ಬರುತ್ತಿದ್ದಾಗ ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಯುವಕ ಹಾಗೂ ಪ್ರೋಫೆಸರ್ ಮಧ್ಯೆ ಜಗಳ ನಡೆದಿತ್ತು.

ಈ ಸಂಧರ್ಭದಲ್ಲಿ ರಾಕೇಶ್, ಫ್ರೋಫೆಸರ್ ಮೇಲೆ ಹಲ್ಲೆಗೂ ಯತ್ನಿಸಿದ್ದ ,ಜೊತೆಯಲ್ಲಿದ್ದ ಪತ್ನಿಗೂ ಬೈಯ್ದಿದ್ದ, ಅಷ್ಟೇ ಅಲ್ಲದೇ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ. ಹೀಗಾಗಿ ಪ್ರೋಫೆಸರ್ ಚಂದ್ರಕಾಂತ್ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ರಾಕೇಶ್ ದೂರಿದ್ದಾನೆ.
ಹಲ್ಲೆ ಮಾಡಿಲ್ಲ….
ಆದರೆ ಪೊಲೀಸರು ಯುವಕನ ಅರೋಪವನ್ನ ಅಲ್ಲಗೆಳೆದಿದ್ದಾರೆ. ಫ್ರೋಫೆಸರ್ ದೂರಿನ ಮೇರೆಗೆ ಯುವಕನನ್ನು ವಿಚಾರಣೆಗೆ ಕರೆಸಿ ಬುದ್ದಿ ಮಾತು ಹೇಳಲಾಗಿದೆ. ಯುವಕನ ಭವಿಷ್ಯದ ದೃಷ್ಟಿಯಿಂದ ಆತನ ಮೇಲೆ ಎಫ್.ಐ.ಆರ್ ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಾವು ಹಲ್ಲೆ ನಡೆಸಿಲ್ಲ ಯುವಕನದ್ದೆ ತಪ್ಪು ಇದೆ ಈ ಬಗ್ಗೆ ಸಿಸಿಟಿವಿಯಲ್ಲೂ ಕೂಡ ವಿಡಿಯೋ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಟ್ಟಿನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಅನ್ನೋ ಆರೋಪದ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತನಿಖೆಗೆ ಅದೇಶ ನೀಡಿದ್ದಾರೆ.
Comments are closed.