
ಕೊಲಂಬೊ: ಶ್ರೀಲಂಕಾದ ಕ್ರಿಕೆಟಿಗ ರಮಿತ್ ರಂಬುಕ್ವೆಲ್ಲ ಕುಡಿದು ವಾಹನ ಚಲಾಯಿಸಿದ್ದಲ್ಲದೆ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಕೊಲಂಬೊದ ನವಾಲ ರೋಡ್ ನಲ್ಲಿ ಈ ಘಟನೆ ನಡೆದಿದೆ. ರಮಿತ್ ನ ರಂಪಾಟ ಇದೇ ಮೊದಲೆನಲ್ಲ. 2016ರಲ್ಲಿ ಕೊಲಂಬೊದಲ್ಲಿ ಕಾರು ಅಪಘಾತ ನಡೆಸಿ ಬಂಧನಕ್ಕೊಳಗಾಗಿದ್ದರು. ರಮಿತ್ ಶ್ರೀಲಂಕಾದ 19 ವಯೋಮಿತಿ ತಂಡವನ್ನು ಪ್ರತಿನಿಧಿಸಿದ್ದು ಆಗ ಕೂಡ ಅಶಿಸ್ತಿನಿಂದ ವರ್ತಿಸಿ ನಿಷೇಧಕ್ಕೊಳಗಾಗಿದ್ದರು.
ಇನ್ನು 2013ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ತವರಿನತ್ತ ಮರಳುತ್ತಿದ್ದಾಗ ಕುಡಿದ ಅಮಲಿನಲ್ಲಿ ಕ್ಯಾಬಿನ್ ಬಾಗಿಲನ್ನು ತೆರೆಯಲು ಹೋಗಿದ್ದರು. ಆಗ ವಿಮಾನ 35 ಸಾವಿರ ಅಡಿ ಮೇಲೆ ಹಾರಾಡುತ್ತಿತ್ತು.
ರಮಿತ್ ರಂಬುಕ್ವೆಲ್ಲ ಶ್ರೀಲಂಕಾ ಪರ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು. ಆದರೆ ಈ 2 ಪಂದ್ಯಗಳ ನಡುವೆ 3 ವರ್ಷಗಳ ಅಂತರವಿತ್ತು.
Comments are closed.