ಕೊಲಂಬೊ: ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ದಾಖಲೆ ಗೆಲುವಿನ ಬಳಿಕ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಪಂದ್ಯಾವಳಿಯ ಮೂರನೇ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದಿತ್ತು. ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ ಓವರ್ ಗೆ 6 ವಿಕೆಟ್ ಗಳ ನಷ್ಟಕ್ಕೆ 214 ರನ್ ಗಳನ್ನು ಗಳಿಸಿ ಬಾಂಗ್ಲಾದೇಶಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.
215 ರನ್ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ 19.4 ಓವರ್ ಗೆ 5 ವಿಕೆಟ್ ಗಳ ನಷ್ಟಕ್ಕೆ 215 ರನ್ ಗಳನ್ನು ಗಳಿಸಿ ಲಂಕಾ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಈ ವೇಳೆ ಮುಶ್ಫಿಕರ್ 35 ಎಸೆತಗಳಲ್ಲಿ 75 ರನ್ ಗಳಿಸಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯವನ್ನು ಗೆಲ್ಲುತ್ತಿದ್ದಂತೆ ಮುಶ್ಫಿಕರ್ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.