
ವಿಜಯಪುರ: ಜಿಲ್ಲೆಯ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಆರೋಪಿ ಶಶಿ ಮುಂಡೆವಾಡಿ ಪೋಲಿಸರ ಕೈಗೆ ಚೂರಿ ಇರಿದ ಕಾರಣ ಪಿಎಸ್‌ಐ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಅರೋಪಿಯ ಕಾಲಿಗೆ ಗುಂಡುತಾಗಿ ಗಾಯಗೊಂಡಿರುವ ಘಟನೆ ಜರುಗಿದೆ.
ಚಡಚಣ ಬಳಿಯ ಬತಡೋಲ ಬಳಿ ಆರೋಪಿ ಶಶಿ ಮುಂಡೆವಾಡಿ ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನೇಸಿದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೇದೆ ಮಾದರ ಮೇಲೆ ಚಾಕುವಿನಿಂದ ಆರೋಪಿ ಶಶಿ ದಾಳಿ ನಡೆಸಿದಾಗ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಅರೋಪಿ ಕಾಲಿಗೆ ಫೈರ್ ಮಾಡಿದಾಗ ಗಾಯಗೊಂಡಿದ್ದಾನೆ. ಕೂಡಲೆ ಗಾಯಾಳು ಅರೋಪಿ ಹಾಗೂ ಪೋಲಿಸರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ಪಿಎಸ್‌ಐ ಗೋಪಾಲ ಹಾಗೂ ಪೇದೆ ಅರವಿಂದ ಮಾದರ ಇವರ ಕೈಗೆ ಗಾಯಗಳಾಗಿವೆ. ಘಟನೆಯ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಎಎಸ್ಪಿ ಶಿವಕುಮಾರ ಗುಣಾರಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸ್ ಗುಂಡೇಟಿನಿಂದ ಗಾಯಗೊಂಡಿರುವ ಶಶಿಧರ ಮುಂಡೆವಾಡಿ ಪತ್ರಕರ್ತ ಸುನಿಲ ಹೆಗ್ಗರವಳ್ಳಿ ಹತ್ಯೆಗೆ ಮತ್ತೋರ್ವ ಪತ್ರಕರ್ತ ರವಿ ಬೆಳಗೆರೆ ಯಿಂದ ಸುಪಾರಿ ಪಡೆದ ಆರೋಪ ಎದುರಿಸುತ್ತಿದ್ದಾನೆ.
-ಉದಯವಾಣಿ
Comments are closed.