ರಾಷ್ಟ್ರೀಯ

90 ವರ್ಷದ ಅತ್ತೆಯ ಮೇಲೆ ಅತ್ಯಾಚಾರ

Pinterest LinkedIn Tumblr


ಕೋಯಿಕ್ಕೋಡ್‌: 90 ವರ್ಷದ ಅತ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದಡಿ ಕೋಯಿಕ್ಕೋಡ್‌ ಗ್ರಾಮಾಂತರ ಪೊಲೀಸರು 50 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗಳು ಮನೆಯಲ್ಲಿ ಇಲ್ಲದ ವೇಳೆ ಮದ್ಯಪಾನಿಯಾಗಿದ್ದ ಆರೋಪಿಯು ಅತ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮಹಿಳೆಯ ಕಿರುಚಾಟ ಕೇಳಿ ಬಂದ ನೆರೆಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯು ಸಂತ್ರಸ್ತ ಮಹಿಳೆಯ ಮಗಳನ್ನು ಮದುವೆಯಾಗಿದ್ದು, ಬಳಿಕ ಆಕೆಯ ಮನೆಯಲ್ಲೇ ವಾಸವಿದ್ದ.

Comments are closed.