ಅಂತರಾಷ್ಟ್ರೀಯ

ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆ

Pinterest LinkedIn Tumblr

ಕರಾಚಿ: ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದ ಸೆನೆಟರ್ ಆಗಿ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಪಾಕಿಸ್ತಾನ ಸಿಂಧ್ ಪ್ರಾಂತ್ಯದ 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆಯಾಗಿರುವ ಹಿಂದೂ ಮಹಿಳೆ.

ಕೃಷ್ಣಕುಮಾರಿ ಅವರು ಬಿಲವಾಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ ಸದಸ್ಯರಾಗಿದ್ದಾರೆ. ಹಿಂದೂಗಳಿಗಾಗಿ ಕಾಯ್ದಿರಿಸಿದ್ದ ಸಿಂಧ್ ಪ್ರಾಂತ್ಯದಿಂದ ಗೆಲುವು ಸಾಧಿಸಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಕೃಷ್ಣಕುಮಾರಿ ಸಿಂಧ್ ಪ್ರಾಂತ್ಯದ ತಾರ್ ಜಿಲ್ಲೆಯ ನಾಗರ್ಪಾರ್ಕರ್ ಕುಗ್ರಾಮದಿಂದ ಬಂದಿದ್ದಾರೆ. 1979ರ ಫೆಬ್ರವರಿಯಲ್ಲಿ ಜುಗ್ನೊ ಕೊಹ್ಲಿ ಬಡ ಕುಟುಂಬದಲ್ಲಿ ಜನಿಸಿದ್ದರು.

Comments are closed.