ಮನೋರಂಜನೆ

ಶ್ರೀದೇವಿಯ ಕೊನೆಯ ಟಿವಿ ಜಾಹಿರಾತು, ವಿಡಿಯೋ ವೈರಲ್

Pinterest LinkedIn Tumblr

ಮುಂಬೈ: ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ನಟಿಸಿರುವ ತಮ್ಮ ಕೊನೆಯ ಟಿವಿ ಜಾಹಿರಾತು ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ನಟಿ ಶ್ರೀದೇವಿ ಅವರು ನಟಿಸಿರುವ ಕೊನೆಯ ಟಿವಿ ಜಾಹಿರಾತು ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಬರೊಬ್ಬರಿ ಒಂದೂವರೆ ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಚಿಂಗ್ಸ್ ಓಟ್ಸ್ ಸಂಸ್ಥೆಯ ಜಾಹಿರಾತಿನಲ್ಲಿ ನಟಿ ಶ್ರೀದೇವಿ ಸೂಪರ್ ಕೂಲ್ ಮದರ್ ಆಗಿ ಮಿಂಚಿದ್ದಾರೆ. ಮಕ್ಕಳಿಗಿಂತ ಹೆಚ್ಚು ಆ್ಯಕ್ಟಿವ್ ಮಮ್ಮಿಯಾಗಿ ನಟಿ ಶ್ರೀದೇವಿ ಮಿಂಚಿದ್ದಾರೆ.

2017ರ ಅಕ್ಟೋಬರ್ ನಲ್ಲೇ ಈ ಜಾಹಿರಾತು ಬಂದಿತ್ತಾದರೂ. ಕಳೆದ ಭಾನುವಾರ ನಟಿ ಶ್ರೀದೇವಿ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ನಟ ಶ್ರೀದೇವಿ ಜಾಹಿರಾತಿನಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ತಾವೇಕೆ ಸೂಪರ್ ಸ್ಚಾರ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

Comments are closed.