ರಾಷ್ಟ್ರೀಯ

ದಲಿತ ಬಾಲಕನ ಕೊಲೆ, ತಾಯಿ, ಸೋದರಿ ಮೇಲೆ ಲೈಂಗಿಕ ದೌರ್ಜನ್ಯ

Pinterest LinkedIn Tumblr


ವಿಲ್ಲುಪುರ: ಅರಕಂದನಲ್ಲೂರಿನಲ್ಲಿ ಎಂಟು ವರ್ಷದ ದಲಿತ ಬಾಲಕನನ್ನು ಥಳಿಸಿ ಸಾಯಿಸಿದ ಗುಂಪೊಂದು ಆತನ ತಾಯಿ ಮತ್ತು ಸೋದರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆಸ್ಪತ್ರೆ ಸೇರಿರುವ ಅವರ ಸ್ಥಿತಿ ಗಂಭೀರವಾಗಿದೆ. ಕಳೆದ ಡಿಸೆಂಬರ್‌ನಿಂದ ಈ ಪ್ರದೇಶದಲ್ಲಿ ದಲಿತರ ಂಏಲೆ ನಡೆದ ಮೂರನೇ ದೌರ್ಜನ್ಯ ಪ್ರಕರಣ ಇದಾಗಿದೆ.

ಸಂತ್ರಸ್ತ ಮಹಿಳೆಯ ಪತಿ ಐದು ವರ್ಷದ ಹಿಂದೆ ತೀರಿಕೊಂಡಿದ್ದು, 14 ವರ್ಷದ ಮಗಳು ಮತ್ತು ಎಂಟು ವರ್ಷದ ಮಗನ ಜತೆ ಅವರು ವಾಸವಿದ್ದರು. ಮೂವರೂ ಮಲಗಿದ್ದಾಗ ಗುಂಪು ಮುಂಜಾನೆ ಮನೆಗೆ ನುಗ್ಗಿ ಬಾಲಕನಿಗೆ ಥಳಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಗುಂಪು ತಾಯಿ ಮತ್ತು ಮಗಳ ಮೇಲೆ ದೌರ್ಜನ್ಯ ನಡೆಸಿದೆ.

ಮನೆಯ ಬಾಗಿಲು ತೆರೆಯದಿರುವುದನ್ನು ಕಂಡ ಪಕ್ಕದ ನಿವಾಸಿಗಳು ಹೋಗಿ ನೋಡಿದಾಗ ಬಾಲಕ ಮೃತಪಟ್ಟ ಸ್ಥಿತಿಯಲ್ಲಿದ್ದು, ತಯಿ ಮಗಳು ಕುಸಿದು ಬಿದ್ದಿದ್ದರು, ಬಟ್ಟೆ ಹರಿದಿತ್ತು. ಅವರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಾಯಿ ಮಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ಮತ್ತು ದಲಿತೇತರ ಕುಟುಂಬಕ್ಕೆ ಜಮೀನು ವಿವಾದವಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಸರಣಿ ಜಾತಿ ಸಂಬಂಧಿ ಗಲಾಟೆಗಳು ನಡೆಯುತ್ತಿವೆ.

Comments are closed.