ರಾಷ್ಟ್ರೀಯ

ಕೂದಲ ಕಸಿ ಮಾಡಿಸಿ ದೃಷ್ಟಿ ಕಳೆದುಕೊಂಡ ವ್ಯಕ್ತಿ

Pinterest LinkedIn Tumblr


ತೆಲಂಗಾಣ: ಇಲ್ಲೊಬ್ಬರು ಬಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೂದಲ ಕಸಿ ಮಾಡಿಸಿ ಕಣ್ಣಿನ ದೃಷ್ಟಿ ಕಳೆದು ಕೊಂಡಿರುವ ಘಟನೆ ನಡೆದಿದೆ.

ತಾರಿಖ್‌ ಖುಸ್ರೋ ಕೂದಲ ಸಮಸ್ಯೆಗೆ ಪರಿಹಾರ ಕೇಳಿ ವ್ಯಕ್ತಿ ಡಾ. ಖಾನ್‌ ಎಂಬವರನ್ನು ಸಂಪರ್ಕಿಸಿದರು. ಅವರು ಇವರಿಗೆ 1,25,000 ರೂಪಾಯಿ ನೀಡಿ ಕೂದಲ ಕಸಿ ಮಾಡಲು ಸಲಹೆ ನೀಡಿದರು. 2700 ಕೂದಲನ್ನು 6 ಗಂಟೆಯೊಳಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಚಿಕಿತ್ಸೆ ಮಾಡಿದ ಮಾರನೆಯ ದಿನ ಜ್ವರ ಬಂತು, ತಲೆ ಊದುಕೊಂಡಿತು, ನಂತರ ಗ್ಯಾಸ್ ಗ್ಯಾಂಗ್ರಿನ್‌ ಕಾಣಿಸಿತು, ಕೂಡಲೇ ತೀವ್ರ ನಿಗಾ ಘಟಕದಲ್ಲಿ ಇರಿಸಿ 26 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಶಸ್ತ್ರ ಚಿಕಿತ್ಸೆ, ಔಷಧಿಗೆ 40 ಲಕ್ಷ ರೂಪಾಯಿ ಖರ್ಚಾಯಿತು. ಇದೀಗ ಕಣ್ಣಿನ ದೋಷ ಕಾಣಿಸಿಕೊಂಡಿದ್ದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ.

‘ನಾನು ವೈದ್ಯರ ವಿರುದ್ಧ ದೂರು ದಾಖಲಿಸಿದೆ, ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರ ರಾಜ್ಯ ವೈದ್ಯಕೀಯ ಮಂಡಳಿಗೆ ದೂರು ನೀಡಿದಾಗ ಆ ವೈದ್ಯನ ಲೈಸೆನ್ಸ್‌ ಅನ್ನು ಎರಡು ವರ್ಷಕ್ಕೆ ಕ್ಯಾನ್ಸಲ್ ಮಾಡಲಾಗಿದೆ’ ಎಂದು ತಾರಿಖ್‌ ಹೇಳಿದ್ದಾರೆ.

ತಾರಿಖ್‌ ಮಧುಮೇಹಿ ರೋಗಿಯಾಗಿದ್ದರೂ ಯಾವುದೇ ಸರಿಯಾದ ಮುಂಜಾಗ್ರತೆ ವಹಿಸದೆ ಕೂದಲ ಕಸಿ ಮಾಡಲಾಗಿತ್ತು. ಅಲ್ಲದೆ ವೈದ್ಯ ಎಂಬಿಬಿಎಸ್‌ ಅಷ್ಟೇ ಓದಿದ್ದರು. ಕೂದಲ ಕಸಿ ಮಾಡುವ ಯಾವುದೇ ಲೈಸೆನ್ಸ್‌ ಅವರ ಬಳಿ ಇರಲಿಲ್ಲ ಆದ್ದರಿಂದ ಇದೊಂದು ಅಪರಾಧವಾಗಿದೆ ಎಂದು ರಾಜ್ಯ ವೈದ್ಯಕೀಯ ಮಂಡಳಿಯ ಕಾರ್ಯದರ್ಶಿ ರವಿಶಂಕರ್‌ ತಿಳಿಸಿದ್ದಾರೆ.

Comments are closed.