ರಾಷ್ಟ್ರೀಯ

ಹಜ್‌ ಯಾತ್ರಿಗಳ ಕೋಟಾ: ಪ್ರಮುಖ ಅಂಕಿಅಂಶಗಳು

Pinterest LinkedIn Tumblr


ದೆಹಲಿ: ಹಜ್ ಯಾತ್ರಿಗಳ ಆಯ್ಕೆಗೆ ಕೇಂದ್ರ ಸರಕಾರ ವಿಧಿಸಿರುವ ಮಾನದಂಡಗಳನ್ನು ಪ್ರಶ್ನಿಸಿ ಕೇರಳ ಹಜ್ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ಆಲಿಸಲಿದೆ.

ಈ ನಿಟ್ಟಿನಲ್ಲಿ ರಾಜ್ಯವಾರು ಹಜ್‌ ಕೋಟಾ ಕುರಿತಂತೆ ಮಾಹಿತಿ ಸೇರಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ತಿಳಿಸಿದೆ. ಭಾರತದಲ್ಲಿ ಹಜ್‌ ಕೋಟಾಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಮಾಹಿತಿಗಳು ಇಂತಿವೆ.

*2018ರಲ್ಲಿ ಒಟ್ಟಾರೆ ಹಜ್‌ ಕೋಟಾವನ್ನು ಕೇಂದ್ರ ಸರಕಾರ ,1,75,025ಕ್ಕೇರಿಸಿದೆ. ಇದು ಸ್ವತಂತ್ರ‍್ಯಾನಂತರದ ಅತ್ಯಂತ ಹೆಚ್ಚಿನದ್ದಾಗಿದೆ.

*ಊರು ವರ್ಷಗಳ ಹಿಂದೆ ಹಜ್‌ ಕೋಟಾ 1,36,020ರಷ್ಟಿತ್ತು. ಈ ಬಾರಿ ಹಜ್‌ ಯಾತ್ರೆಗೆಂದು ಒಟ್ಟಾರೆ 3,55,000 ಅರ್ಜಿಗಳು ಬಂದಿವೆ.

*45 ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಮಹಿಳೆಯರನ್ನು ಕನಿಷ್ಠ ನಾಲ್ಕು ಜನರ ಗುಂಪಿನಲ್ಲಿ, ಯಾವುದೇ ಮೆಹ್ರಮ್‌(ಸಹಾಯಕ)ನ ನೆರವಿಲ್ಲದೇ ಯಾತ್ರೆ ಮಾಡಿಕೊಂಡು ಬರಲು ಸರಕಾರ ಅವಕಾಶ ನೀಡಿತ್ತು.

*ಸರಕಾರದ ಈ ನಡೆಯಿಂದಾಗಿ ಮೆಹ್ರಮ್‌ ನೆರವಿಲ್ಲದೇ ಯಾತ್ರೆ ಮಾಡಿಕೊಂಡು ಬರಲೆಂದು 1300 ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

*ಎಲ್ಲ ದೇಶಗಳ ಪೈಕಿ ಭಾರತದಿಂದಲೇ ಅತ್ಯಂತ ಹೆಚ್ಚು ಯಾತ್ರಿಗಳು ಹಜ್‌ಗೆ ತೆರಳುತ್ತಿದ್ದಾರೆ. ಭಾರತೀಯ ಹಜ್‌ ಕಮಿಟಿ ಹಾಗು ಖಾಸಗೀ ಏಜೆಂಟ್‌ಗಳ ಮೂಲಕ ಹಜ್‌ ಯಾತ್ರೆ ಮಾಡಿಕೊಂಡು ಬರುತ್ತಿದ್ದಾರೆ.

*2017ರಲ್ಲಿ ಹಜ್‌ ಕೋಟಾವನ್ನು 1,70,025ಕ್ಕೆ ಏರಿಸಲಾಗಿತ್ತು. 2012ರಲ್ಲಿ 1,25,110 ಮಂದಿಯನ್ನು ಹಜ್ ಯಾತ್ರೆಗೆ ಕಳುಹಿಸಲಾಗಿತ್ತು.

*11,652 ಸ್ಥಾನಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ ಹಾಗು 11,006 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ಅತ್ಯಂತ ಹೆಚ್ಚಿನ ಹಜ್‌ ಕೋಟಾ ಹೊಂದಿರುವ ರಾಜ್ಯಗಳಾಗಿವೆ.

*ಜೆಡ್ಡಾದಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯೊಂದಿಗೆ ಸಂಪರ್ಕಕ್ಕೆ ಬಂದು ಯಾತ್ರಿಗಳಿಗೆ ಹಜ್‌ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟಿನಲ್ಲಿ ಭಾರತೀಯ ಹಜ್‌ ಸಮಿತಿ 2002ರಲ್ಲಿ ಹಜ್‌ ಸಮಿತಿ ಕಾಯಿದೆಯನ್ನು ಜಾರಿಗೆ ತಂದಿದೆ.

*2011ರ ಜನಗಣತಿ ಪ್ರಕಾರದಲ್ಲಿ ಭಾರತೀಯ ಹಜ್‌ ಸಮಿತಿ ನಿರ್ಧರಿಸುವ ಕೋಟಾವನ್ನು ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳ ಮುಸ್ಲಿಂ ಜನಸಂಖ್ಯೆಯ ಅನುಪಾತದಲ್ಲಿ ಹಂಚಲಾಗುತ್ತದೆ.

Comments are closed.