ರಾಷ್ಟ್ರೀಯ

ರಾಮ ಮಂದಿರದ ತದ್ರೂಪಿನಂತೆ ಅಯೋಧ್ಯೆ ರೈಲ್ವೇ ನಿಲ್ದಾಣ: ಕೇಂದ್ರ ಸಚಿವ

Pinterest LinkedIn Tumblr


ಅಯೋಧ್ಯೆ: ಅಯೋದ್ಯೆಯಲ್ಲಿ ನಿರ್ಮಾಣವಾಗಲಿರುವ ರೈಲ್ವೇ ನಿಲ್ದಾಣ ರಾಮ ಮಂದಿರದ ತದ್ರೂಪಾಗಿರಲಿದೆ ಎಂದು ಕೇಂದ್ರ ಸಚಿವ ಮನೋಜ್‌ ಸಿನ್ಹಾ ತಿಳಿಸಿದ್ದಾರೆ.

80 ಕೋಟಿ ರು ವೆಚ್ಚದಲ್ಲಿ ಅಯೋಧ್ಯೆ ರೈಲ್ವೇ ನಿಲ್ದಾಣದ ಮರು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸಿನ್ಹಾ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇದೇ ವಿಚಾರವಾಗಿ ರೈಲ್ವೇ ಇಲಾಖೆ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಿದೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದ್ದಾರೆ.

ರಾಮ ಭಕ್ತರು ಇಲ್ಲಿಗೆ ಆಗಮಿಸಲು ನೆರವಾಗುವ ಉದ್ದೇಶದಿಂದ ಅಯೋಧ್ಯೆಯನ್ನು ದೇಶದ ವಿವಧ ಮೂಲೆಗಳಿಗೆ ಸಂಪರ್ಕಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದ ಸಿನ್ಹಾ “ಅಯೋಧ್ಯೆ

ರೈಲ್ವೇ ನಿಲ್ದಾಣದ ಮರು ನಿರ್ಮಾಣದ ಕುರಿತಂತೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಲದಿಂದಲೂ ಚರ್ಚಿಸಲಾಗುತ್ತಿದೆ. ರೈಲ್ವೇ ನಿಲ್ದಾಣದ ನಿರ್ಮಾಣ ಮುಗಿಯುತ್ತಲೇ ರಾಮ ಮಂದಿರದ ನಿರ್ಮಾಣ ಆರಂಭವಾಗಲಿದೆ” ಎಂದು ತಿಳಿಸಿದ್ದಾರೆ.

ಹೊಸ ನಿಲ್ದಾಣದಲ್ಲಿ ಸಕಲ ಅತ್ಯಾಧುನಿಕ ಸೌಲಭ್ಯಗಳಿರಲಿವೆ.

Comments are closed.