ಗಲ್ಫ್

ದುಬೈ; ನಂ.1ನೇ ಸಂಖ್ಯೆಯ ನಂಬರ್ ಪ್ಲೇಟ್ ಪಡೆಯುವ ಆಸೆಗೆ ಹೋಗಿ ಜೈಲು ಸೇರಿದ!

Pinterest LinkedIn Tumblr

ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಉದ್ಯಮಿಯೊಬ್ಬ 1ನೇ ಸಂಖ್ಯೆಯ ನಂಬರ್ ಪ್ಲೇಟ್ ಪಡೆಯುವುದಕ್ಕಾಗಿ ನಕಲಿ ಚೆಕ್ ನೀಡಿ ಜೈಲು ಸೇರಿದ್ದಾನೆ. ಉದ್ಯಮಿ ಅಬ್ದುಲ್ಲಾ ಅಲ್ ಮಹ್ರಿ 2016ರ ನವೆಂಬರ್​ನಲ್ಲಿ ನಡೆದ ಹರಾಜಿನಲ್ಲಿ 54.34 ಕೋಟಿ ರೂ. ಪಾವತಿಸಿ ನಂ.1 ಲೈಸೆನ್ಸ್ ಪ್ಲೇಟ್ ಖರೀದಿಸಿದ್ದ. ಈ ವೇಳೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಅವನಿಗೆ 3 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಅಪರೂಪದ ನಂಬರ್​ನಿಂದ ಲಾಭ ಮಾಡುವ ಉದ್ದೇಶ ಹೊಂದಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.

ಚೆಕ್ ಬೌನ್ಸ್ ಆಗುವುದೆಂಬುದು ಅಬ್ದುಲ್ಲಾಗೆ ತಿಳಿದಿತ್ತು. ಆದರೆ, ಖರೀದಿಸಿದ ಅಪರೂಪದ ನಂಬರ್ ಅನ್ನು ಇನ್ನಷ್ಟು ಹೆಚ್ಚಿನ ಬೆಲೆಗೆ ಮಾರಿ ಅದರಿಂದ ಲಾಭ ಪಡೆದುಕೊಳ್ಳುವುದು ಮತ್ತು ನಂಬರ್ ಪ್ಲೇಟ್ ಖರೀದಿಸಲು ತಾನು ನೀಡಬೇಕಾಗಿದ್ದ ಬೆಲೆಯನ್ನು ನೀಡುವುದು ಆತನ ಉದ್ದೇಶವಾಗಿತ್ತು. ಆದರೆ, ಯುಎಇಯ ಕಾನೂನಿನಂತೆ ಸರ್ಕಾರ ನಡೆಸುವ ಹರಾಜಿನಲ್ಲಿ ಖರೀದಿಸಿದ ವಸ್ತುವಿನ ಪೂರ್ಣ ಬೆಲೆಯನ್ನು ಪಾವತಿಸಿದ ಬಳಿಕವಷ್ಟೇ ಆ ವಸ್ತುವಿನ ಮರು ಮಾರಾಟಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ಮಾರಾಟ ಮಾಡಿದರೂ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ ಪೇಚಿಗೆ ಸಿಲುಕಿಕೊಂಡ ಅಬ್ದುಲ್ಲಾ ಲಾಭದ ಆಸೆಯಿಂದ ಜೈಲು ಸೇರಿದ್ದಾನೆ.

Comments are closed.