ಕರಾವಳಿ

ಕುಂದಾಪುರ(ಗಂಗೊಳ್ಳಿ): ನದಿಗೆ ಬಿದ್ದು ಮೀನುಗಾರ ಸಾವು

Pinterest LinkedIn Tumblr

ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಪೋರ್ಟ್ ಕಚೇರಿ ಬಳಿ ಪಂಚಗಂಗಾವಳಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರ ಆಯ ತಪ್ಪಿ ದೋಣಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಗಂಗೊಳ್ಳಿ ಮಲ್ಯರಬೆಟ್ಟು ನಿವಾಸಿ ಸತೀಶ್ ಖಾರ್ವಿ (30) ನದಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.

ಇತರೇ ಮೀನುಗಾರರ ಜೊತೆ ಮೀನು ಹಿಡಿಯಲು ತೆರಳಿದಾಗ ಈ ದುರ್ಘಟನೆ ನಡೆದಿದ್ದು ಕೂಡಲೇ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅಷ್ಟರಲ್ಲಾಗಲೇ ಅವರು ಮ್ರತಪಟ್ಟಿದ್ದರೆನ್ನಲಾಗಿದೆ. ಸತೀಶ್ ಖಾರ್ವಿ ಅವರಿಗೆ ಎಪ್ರಿಲ್ ತಿಂಗಳಿನಲ್ಲಿ ಮದುವೆ ನಡೆಯುವುದರಲ್ಲಿತ್ತು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.