ರಾಷ್ಟ್ರೀಯ

ಅಹ್ಮದಾಬಾದ್​​ನಲ್ಲಿ ಕೋಲು ಹಿಡಿದು ಪ್ರೇಮಿಗಳನ್ನು ಅಟ್ಟಾಡಿಸಿದ ಬಜರಂಗಿಗಳು

Pinterest LinkedIn Tumblr


ನವದೆಹಲಿ: ದೇಶದ ವಿವಿಧೆಡೆ ವ್ಯಾಲೆಂಟೈನ್ಸ್ ಡೇ ಆಚರಿಸುವುದಕ್ಕೆ ಬಜರಂಗದಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಗುಜರಾತ್​ನ ಅಹ್ಮದಾಬಾದ್​​ನಲ್ಲಿ ಬಜರಂಗದಳ ಕಾರ್ಯಕರ್ತರು ಕೈಯಲ್ಲಿ ಕೋಲು ಹಿಡಿದು ಪ್ರೇಮಿಗಳನ್ನು ಅಟ್ಟಾಡಿಸಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಪಾರ್ಕ್​, ರಸ್ತೆ ಪಕ್ಕದಲ್ಲಿ ನಿಂತಿದ್ದ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ ತೋರಿದ್ದಾರೆ.

ಇನ್ನು ಚೆನ್ನೈನಲ್ಲೂ ಪ್ರೇಮಿಗಳ ದಿನಾಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಾಯಿ ಹಾಗೂ ಕತ್ತೆಗೆ ಮದುವೆ ಮಾಡಿಸುವ ಮೂಲಕ ಬಜರಂಗದಳ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡಿದರು.

ಹೈದರಾಬಾದ್​​ನಲ್ಲೂ ವ್ಯಾಲೆಂಟೈನ್ಸ್ ಡೇಗೆ ವಿರೋಧ ವ್ಯಕ್ತವಾಯಿತು. ಬಜರಂಗದಳ ಕಾರ್ಯಕರ್ತರು ನಡುರಸ್ತೆಯಲ್ಲೇ ಪ್ರತಿಕೃತಿ ದಹಿಸಿ ವಿರೋಧ ವ್ಯಕ್ತಪಡಿಸಿದರು.

Comments are closed.