ಕರಾವಳಿ

ಶಿವರಾಜ್ ಕರ್ಕೇರಾ ಕೊಲೆ ಪ್ರಕರಣ :ಕೃತ್ಯಕ್ಕೆ ಸಂಚು ರೂಪಿದ ಇಬ್ಬರ ಬಂಧನ

Pinterest LinkedIn Tumblr

ಮಂಗಳೂರು, ಜನವರಿ 26: ತಣ್ಣೀರುಬಾವಿಯ ಬೆಂಗರೆಯಲ್ಲಿ ಜನವರಿ 22ರಂದು ನಡೆದ ಶಿವರಾಜ್ ಕರ್ಕೇರಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಕೃತ್ಯಕ್ಕೆ ಸಂಚು ರೂಪಿದರನ್ನೆಲಾದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಣ್ಣೀರುಬಾವಿ ಕೋರ್ದಬ್ಬು ದೈವಸ್ಥಾನ ಬಳಿಯ ಜೀವನ್ ಪಿರೇರಾ ಯಾನೆ ಜೀವನ್ (36) ಹಾಗೂ ಬಾಗಲಕೋಟೆಯ ಪ್ರಸ್ತುತ ಕುದ್ರೋಳಿ ಬೆಂಗ್ರೆ ಗ್ರಾಮದಲ್ಲಿ ವಾಸವಾಗಿರುವ ಸತೀಶ್ ಯಾನೆ ಸಚ್ಚು ಯಾನೆ ಸತೀಸ್ ಗೌಡಪ್ಪ (29) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಕೊಲೆ ಕೃತ್ಯಕ್ಕೆ ಸಂಚು ರೂಪಿಸಲು ಸಹಕರಿಸಿದ್ದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವರಾಜ್ ಕರ್ಕೆರಾ

ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತಣ್ಣೀರುಬಾವಿಯ ಬೆಂಗರೆಯ ತಮ್ಮ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್ ಕರ್ಕೆರಾ (45) ಅವರನ್ನು ಜನವರಿ ೨೨ರಂದು ಮುಂಜಾನೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಕುಖ್ಯಾತ ರೌಡಿ ಪ್ರದೀಪ್ ಮೆಂಡನ್ ಗ್ಯಾಂಗ್ನ ಸದಸ್ಯ, ಬಿಜೈ ರಾಜ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಭರತೇಶ್ ಎಂಬಾತನ ಅಣ್ಣ ಶಿವರಾಜ್ ಕರ್ಕೆರಾ ಅಮಾಯಕನಾಗಿದ್ದು, ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನನ್ನು ಸಾಯಿಸಲಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ನಡೆದ ಕೆಲವೇ ಸಮಯದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳಾದ ಸುನೀಲ್ ಪೂಜಾರಿ ( 32), ದೀರಾಜ್ (25) ಹಾಗೂ ಮಲ್ಲೇಶ್ ಯಾನೆ ಮಾದೇಶ್ (23) ರನ್ನು ಕಾರಾಗೃಹದಲ್ಲಿಡಲಾಗಿದೆ.

ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್., ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪಣಂಬೂರು ಪೊಲೀಸ್ ಠಾಣಾ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್‌ಐ ಕುಮರೇಶನ್, ಎಎಸ್‌ಐ ಮುಹಮ್ಮದ್, ಸಿಬ್ಬಂದಿಗಳಾದ ಕುಶಲ ಮಣಿಯಾನಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ರಾಜಾ, ಶರಣ್ ಕಾಳಿ, ಜಗದೀಶ್, ಚಂದ್ರಹಾಸ ಆಳ್ವ, ರಾಧಾಕೃಷ್ಣ, ರವಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.