
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಸಂಚಾರಿ ಪೊಲೀಸರು ದಂಡ ವಿಸುವುದು ಸಾಮಾನ್ಯ ಸಂಗತಿ. ಆದರೆ ನಗರದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಆರೋಪದ ಮೇರೆಗೆ ಲಾರಿಗೆ ದಂಡ ವಿಧಿಸಿರುವ ವಿಚಿತ್ರ ಪ್ರಸಂಗ ಜರುಗಿದೆ.
ಹೌದು ಪೊಲೀಸರು ಮಾಡಿರುವ ಎಡವಟ್ಟೋ, ಇಲ್ಲವೇ ವಾಹನ ಸವಾರರೇ ತಪ್ಪು ಸಂಖ್ಯೆ ನೀಡಿದರೋ ತಿಳಿದಿಲ್ಲ. ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಿ ರಶೀದಿ ನೀಡಿರುವ ನೋಂದಣಿ ಸಂಖ್ಯೆಯ ವಾಹನ ಬೈಕ್ ಆಗಿರದೆ ಲಾರಿಯಾಗಿರುವುದು ವಿಶೇಷ.
ನಗರದ ಸಂಚಾರಿ ಪೊಲೀಸರು ಕೆಎ 40 5999 ಸಂಖ್ಯೆಯ ನೋಂದಣಿ ಸಂಖ್ಯೆ ಹೊಂದಿರುವ ಬೈಕ್ಗೆ 100 ರೂ.ದಂಡ ವಿಸಿ ರಶೀದಿ ನೀಡಿದ್ದಾರೆ. ಆದರೆ ಈ ಸಂಖ್ಯೆ ಹಿಡಿದು ಪ್ರಾದೇಶಿಕ ಸಾರಿಗೆ ಇಲಾಖೆ ಅಕಾರಿಗಳನ್ನು ಸಂಪರ್ಕಿಸಿದರೆ ಈ ರೀತಿಯ ಸಂಖ್ಯೆ ದ್ವಿಚಕ್ರ ವಾಹನಗಳಿಗೆ ನೀಡುವುದೇ ಇಲ್ಲ ಎಂಬ ಸ್ಪಷ್ಟೀಕರಣ ದೊರೆತಿದೆ. ಅಲ್ಲದೆ ಇದೇ ನೋಂದಣಿ ಸಂಖ್ಯೆಯ ಭಾರೀ ವಾಹನದ ಲಾರಿಯೊಂದು ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದು, ಈ ಲಾರಿ ಮಾಲೀಕ ಚಿಕ್ಕಬಳ್ಳಾಪುರ ನಗರದ ಸರ್ಎಂವಿ ಬಡವಾಣೆಯ ರಾಮಕೃಷ್ಣ ಎಂಬುವರಿಗೆ ಸೇರಿದ್ದಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಮತ್ತು ಆರ್ಟಿಒ ಅಕಾರಿಗಳು ತಮ್ಮದೇ ಆದ ಹೇಳಿಕೆ ಮೂಲಕ ಜಾರಿಕೊಂಡಿದ್ದು, ವಾಸ್ತವವಾಗಿ ಆಗಿರುವುದೇನು ಎಂಬುದು ಮಾತ್ರ ನಿಗೂಢ. ಇನ್ನು ಸಂಚಾರಿ ಎಎಸ್ಐ ಮಟ್ಟದ ಅಕಾರಿಗಳು ಮಾತ್ರ ದಂಡ ಹಾಕಬೇಕು ಎಂಬುದು ಕಾನೂನು. ಆದರೆ ಪೇದೆಗಳೇ ಹೆಚ್ಚು ದಂಡ ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಈ ಲೋಪದಿಂದಾಗಿ ಪೇದೆಗಳು ಸಮರ್ಪಕವಾಗಿ ನೋಂದಣಿ ಸಂಖ್ಯೆ ನಮೂದಿಸುವ ಬದಲು ತಮಗೆ ಇಷ್ಟ ಬಂದ ರೀತಿಯಲ್ಲಿ ನಮೂದಿಸು ತ್ತಿರುವ ಕಾರಣ ಇಂತಹ ಅಚಾತುರ್ಯಗಳಿಗೆ ಕಾರಣವಾಗಿದೆ ಎಂಬುದು ಪ್ರಜ್ಞಾವಂತರ ಆರೋಪವಾಗಿದೆ.
ನಗೆಪಾಟಲು: ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಎಂಬ ಅಭಿಯಾನ ಹಮ್ಮಿಕೊಂಡಿರುವುದು ಸಮಾಜದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ ದಂಡ ರಶೀತಿ ಹಾಕುವಾಗ ಮಾಡುವ ಎಡವಟ್ಟುಗಳು ಮಾತ್ರ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದೆ.
ನಕಲಿ ನಂಬರ್ ಪ್ಲೇಟ್ ದಂಧೆ ಸುಳಿವು
ದಂಡ ರಶೀತಿಯಲ್ಲಿ ತಪ್ಪು ವಾಹನ ನೋಂದಣಿ ಸಂಖ್ಯೆ ದಾಖಲು ಪ್ರಕರಣ ಕಣ್ತಪ್ಪಿನಿಂದ ಆಗಿರಬಹುದು ಎಂದು ಭಾವಿಸಿದರೂ ಒಳಹೊಕ್ಕಿ ನೀಡಿದಾಗ ನಕಲಿ ನಂಬರ್ ಪ್ಲೇಟ್ ದಂಧೆ ಸುಳಿವನ್ನು ನೀಡಿದೆ. ಜಿಲ್ಲೆಯಾದ್ಯಂತ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿರುವ ದೂರು ಇದ್ದು, ಈ ಪ್ರಕರಣವನ್ನೇ ಬೆನ್ನತ್ತಿ ನಕಲಿ ನಂಬರ್ ಪ್ಲೇಟ್ ದಾಳಿ ನಡೆದಿದೆ.
ಕೆಎ 40 5999 ನೋಂದಣಿ ಸಂಖ್ಯೆ ನಕಲು ಮಾಡಿ ಬೈಕ್ಗೆ ಬಳಸಿರುವ ಸಾಧ್ಯತೆ ಇದೆ. ದಂಡ ಪಾವತಿಸಿರುವ ಬೈಕ್ ಸಂಖ್ಯೆ ನಕಲಿಯೇ ಆಗಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ನಮ್ಮ ಪೊಲೀಸರು ತಪ್ಪಾಗಿ ನಂಬರ್ ಬರೆಯಲು ಸಾಧ್ಯವೇ ಇಲ್ಲ. ಇದು ನಕಲಿ ನಂಬರ್ ಪ್ಲೇಟ್ ಹಾವಳಿ
– ಕಾರ್ತಿಕ್ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ
Comments are closed.