ಕರಾವಳಿ

1ನೇ ತರಗತಿ ಬಾಲಕಿಗೆ ಲೈಂಗಿಕ ಪೀಡನೆ: ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತನ ಬಂಧನ

Pinterest LinkedIn Tumblr

ಕುಂದಾಪುರ: ಒಂದನೇ ತರಗತಿ ಓದುತ್ತಿದ್ದ ನೆರೆಮನೆಯ ಬಾಲಕಿಗೆ ಲೈಂಗಿಕ ಪೀಡನೆ ನೀಡಿದ ಅಪ್ರಾಪ್ತ ಬಾಲಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಯಡಮೊಗೆ ಎಂಬಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಅಂಗಡಿಗೆ ಬಂದಿದ್ದ 6 ವರ್ಷ ಪ್ರಾಯದ ಪರಿಶಿಷ್ಟ ಜಾತಿಯ ಬಾಲಕಿಗೆ 16 ವರ್ಷ ಪ್ರಾಯದ ಬಾಲಕ ಲೈಂಗಿಕ ಕಿರುಕುಳ ನೀಡಿದ್ದು ಇದರಿಂದ ಬೆದರಿದ ಬಾಲಕಿ ಮನೆಗೆ ಓಡಿ ಹೋಗಿ ವಿಚಾರ ತಿಳಿಸಿದ್ದಾಳೆ. ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.