ಕರಾವಳಿ

ಮಂಗಳೂರು ಪೊಲೀಸ್‌ ಕಮಿಷನರ್ ಟಿ.ಆರ್.ಸುರೇಶ್ ಅವರಿಗೆ ರಾಷ್ಟ್ರಪತಿ ಪದಕ

Pinterest LinkedIn Tumblr

ಮಂಗಳೂರು : ರಾಷ್ಟ್ರಪತಿ ಪದಕಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್ ಆಯ್ಕೆಯಾಗಿದ್ದಾರೆ. ದಕ್ಷ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಈ ರಾಷ್ಟ್ರಪತಿ ಪದಕವನ್ನು ಗಣರಾಜ್ಯೋತ್ಸವ ದಿನದಂದು ಟಿ.ಆರ್.ಸುರೇಶ್ ಅವರು ಪದಕ ಸ್ವೀಕರಿಸಲಿದ್ದಾರೆ.

ಕರ್ನಾಟಕದಿಂದ ಹಲವು ಸಾಧಕ ಪೊಲೀಸರಿಗೆ ಈ ಸನ್ಮಾನ ಲಭಿಸಿದ್ದು, ದಕ್ಷಿಣ ಕನ್ನಡದಿಂದ ಕೆಎಸ್‌ಆರ್‌ಪಿಯ ಹೆಡ್‌‌ ಕಾನ್ಸ್‌ಟೇಬಲ್‌ ಕಮಲಾಕ್ಷ ಅವರಿಗೂ ರಾಷ್ಟ್ರಪತಿ ಪದಕ ದೊರೆಯಲಿದೆ.

ಇತ್ತೀಚೆಗೆ ನಡೆದ ದೀಪಕ್ ರಾವ್ ಹಾಗೂ ಬಶೀರ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನ, ಶೂಟೌಟ್ ಪ್ರಕರಣದ ಆರೋಪಿಗಳ ಬಂಧನ, ಗಾಂಜಾ ಮಾಫಿಯಾದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಸೇರಿದಂತೆ ಕರಾವಳಿಯಲ್ಲಿ ಶಾಂತಿ ನೆಲೆಸಲು ಕಾರಣರಾದ ಪೊಲೀಸ್‌‌‌ ಆಯುಕ್ತ ಟಿ.ಆರ್.ಸುರೇಶ್ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲೂ ಶ್ಲಾಘನೆ ವ್ಯಕ್ತವಾಗಿದೆ. ಹಾಗಾಗಿ ಇದೀಗ ರಾಷ್ಟ್ರಪತಿ ಪದಕ ಗೌರವಕ್ಕೆ ಪ್ರಾಪ್ತರಾಗಿದ್ದು, ಅವರ ಸಾಧನೆಗೆ ಮತ್ತೊಂದು ಗರಿಯಾಗಿದೆ.

Comments are closed.