ಕರ್ನಾಟಕ

ದನಗಳಿಗೆ ಭಾಷೆ ಇಲ್ಲ, ಜನರಿಗೆ ಭಾಷೆ ಇದೆ: ಪ್ರತಾಪ್‌ ಸಿಂಹ ವಿರುದ್ಧ ಸಚಿವ ರಮೇಶ್‌ ಕುಮಾರ್‌ ಕಿಡಿ

Pinterest LinkedIn Tumblr


ಗದಗ: ಆರ್ಟಿಕಲ್‌ ಬರೆದು ಅವಕಾಶ ಸಿಕ್ಕಿತು ಎಂದು ಲೋಕಸಭಾ ಸದಸ್ಯರಾದ ಮಾತ್ರಕ್ಕೆ ನೆಹರೂ ಅವರನ್ನು ಹೀಯಾಳಿಸಿ ಬರೆಯಬಹುದ? ದನಗಳಿಗೆ ಭಾಷೆ ಇಲ್ಲ, ಆದರೆ ಜನರಿಗೆ ಭಾಷೆ ಇದೆ ಎಂದು ಸಂಸದ ಪ್ರತಾಪ್‌ ಸಿಂಹ ಅವರ ವಿರುದ್ಧ ಸಚಿವ ರಮೇಶ್‌ಕುಮಾರ್‌ ಹರಿಹಾಯ್ದಿದ್ದಾರೆ.

ಗದಗದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಭಾಷಣದಲ್ಲಿ ಮಾತನಾಡಿದ ಅವರು, ಭಾಷೆಯ ಪ್ರಯೋಗ ಯೋಗ್ಯ ಸ್ಥಿತಿಯಲ್ಲಿ ಮಾಡದಿದ್ದರೆ ಜನರಿಗೆ ಮತ್ತು ದನಗಳಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ದೇಶದಲ್ಲಿ ಯಾರು ಯಾರ ಬಗ್ಗೆ ಮಾತನಾಡಬೇಕು ಎನ್ನುವ ಸಂಹಿತೆಯೂ ಇರದಂತಾಗಿದೆ ಎಂದು ಹೇಳಿದರು.

ಸಂಸತ್‌ನಲ್ಲಿ ಯಾವ ಭಾಷೆ ಬಳಸಬೇಕು, ಹೊರಗೆ ಯಾವ ಭಾಷೆ ಬಳಸಬೇಕು ಎನ್ನುವ ಸಂಯಮವನ್ನು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

Comments are closed.